ಮೂವರ ಮೇಲೆ ಮಂಗಗಳ ದಾಳಿ, ಇಬ್ಬರ ಪರಿಸ್ಥಿತಿ ಗಂಭೀರ..

Untitled-1
ಸಾಂದರ್ಭಿಕ ಚಿತ್ರ
Published on

ವಿಜಯಪುರ: ಚಿರತೆ ಮೊದಲಾದ ಕಾಡುಪ್ರಾಣಿಗಳು ನಾಡಿಗೆ ಬರುವುದು, ಮನುಷ್ಯರ ಮೇಲೆ ಎರಗುವುದು ಮುಂತಾದ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಮಂಗಗಳು ಕೂಡ ಮನುಷ್ಯರ ಮೇಲೆ ಮಾರಕ ಎನಿಸುವಂತೆ ದಾಳಿ ನಡೆಸಿದ್ದೂ ಕೂಡ ವರದಿಯಾಗಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಅರಳದಿನ್ನಿ ಗ್ರಾಮದಲ್ಲಿ ಮಂಗಗಳು ಮೂವರ ಮೇಲೆ ದಾಳಿ ನಡೆಸಿದ್ದು, ಆ ಪೈಕಿ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಇಲ್ಲಿನ ಹಣಮಂತ ತುಬಾಕಿ ಹಾಗೂ ಇನ್ನಿಬ್ಬರು ಅಪರಿಚಿತರ ಮೇಲೆ ಮಂಗಗಳು ಭಯಂಕರವಾಗಿ ಎರಗಿವೆ.

ಹಣಮಂತ ಅವರಿಗೆ ನಿಡಗುಂದಿಯ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಿದ್ದು, ಗಂಭೀರ ಗಾಯಾಳುಗಳಾಗಿರುವ ಇಬ್ಬರು ಅಪರಿಚಿತರನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net