

ರಾಮನಗರ
ರಸ್ತೆ ಬದಿಯಲ್ಲಿಯೇ ಬಿದ್ದಿದ್ದ ಗೋಣಿ ಚೀಲ... ಅನುಮಾನಗೊಂಡು ನೋಡಿದರೆ ಗ್ರಾಮಸ್ಥರಿಗೆ ಶಾಕ್... ಆದರೆ ಈ ಕೆಲಸ ಮಾಡಲಿಲ್ಲ ಎಂದರೆ ದೇವರು ಮೆಚ್ಚುವನೇ ಎನ್ನುವ ಭಯ.., ಇದೇ ಭಯದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಧನ್ಯತೆ ಮೆರೆದ ಯುವಕರು...
ಹೌದು ಇಂತಹ ಒಂದು ವಿಚಿತ್ರ, ಭಾವನಾತ್ಮಕ ಸಂದರ್ಭದಲ್ಲಿ ಸಾಯಾಗಿದ್ದು ಹಾರೋಹಳ್ಳಿ ತಾಲೂಕಿನ ವಾಸುಪಟ್ಟಣ ಗ್ರಾಮ.
ಯಲಚವಾಡಿ ಗ್ರಾಪಂ ವ್ಯಾಪ್ತಿಗೆ ಸೇರುವ ವಾಸುಪಟ್ಟಣದ ದೊಡ್ಡೂರು ರಸ್ತೆಯ ಬದಿಯಲ್ಲಿ ಭಾನುವಾರ ಬೆಳಗ್ಗೆ ಅನುಮಾನಾಸ್ಪದ ರೀತಿಯಲ್ಲಿ ಗೋಣಿ ಚೀಲವೊಂದು ಪತ್ತೆಯಾಗಿದೆ. ತೆರೆದು ನೋಡಿದಾಗ ಕೋತಿಗಳನ್ನು ಹತ್ಯೆ ಮಾಡಿ, ಅವುಗಳನ್ನು ಚೀಲಕ್ಕೆ ತುಂಬಿ ಬಿಸಾಡಲಾಗಿದೆ.
ಒಟ್ಟು 7 ಕೋತಿಗಳನ್ನು ಹತ್ಯೆ ಮಾಡಿರುವುದು ಕಂಡು ಬಂದಿದೆ. ನಂತರ ಹನುಮಂತನ ಸ್ವರೂಪಿಯಾದ ಕೋತಿಗಳನ್ನು ಸ್ಥಳಿಯರು ವಿಧಿ ವಿಧಾನಗಳೊಂದಿಗೆ ಗುಂಡಿ ತೆಗೆದು ಅಂತ್ಯಸಂಸ್ಕಾರ ಮಾಡಿದ್ದಾರೆ. ಈ ವೇಳೆ ಸ್ಥಳಿಯರಾದ ರಮೇಶ್, ರವಿ, ವೆಂಕಟೆೇಶ್, ಲಿಂಗೇಗೌಡ, ಮುನಿಯಪ್ಪ ಮುಂತಾದವರು ಇದ್ದರು.
ಈ ಭಾಗದಲ್ಲಿ ತೋಟಗಳಿಗೆ ಕೋತಿಗಳು ಲಗ್ಗೆ ಇಡುವುದು ಸಾಮಾನ್ಯವಾಗಿದೆ. ಗುಂಪು ಗುಂಪಾಗಿ ಲಗ್ಗೆ ಇಟ್ಟು ತೆಂಗು ಸೇರಿ ಇತರ ಬೆಳೆಗಳನ್ನು ನಾಶ ಮಾಡುತ್ತಿದ್ದವು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹತ್ಯೆ ಮಾಡಿ ಬಿಸಾಡಿಸಿರುವ ಸಾಧ್ಯತೆಯೂ ಇದೆ. ಜತೆಗೆ ಕೋತಿಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿರುವ ಜತೆಗೆ ಬಂದೂಕಿನಿಂದ ದಾಳಿ ನಡೆಸಲಾಗಿದೆ ಎಂದು ಸ್ಥಳಿಯರು ಹೇಳುತ್ತಿದ್ದಾರೆ.
ಕೋತಿಗಳು ತೋಟಕ್ಕೆ ಲಗ್ಗೆ ಇಟ್ಟು ಎಷ್ಟೇ ಹಾನಿ ಮಾಡಿದರೂ ಇವುಗಳನ್ನು ಸೆರೆ ಹಿಡಿದು ಸುರತ ಪ್ರದೇಶಕ್ಕೆ ಬಿಡುವಂತೆ ಒತ್ತಾಯಿಸಬೇಕಾದವರು, ಕೋತಿಗಳನ್ನು ಹತ್ಯೆ ಮಾಡಿರುವುದು ಅಕ್ಷಮ್ಯ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ವಯಂ ಪ್ರಕರಣ ದಾಖಲು ಮಾಡಿಕೊಂಡು, ಹೂತಿರುವ ಕೋತಿಗಳನ್ನು ತೆಗೆದು ಮರಣೋತ್ತರ ಪರೀೆ ನಡೆಸುವ ಮೂಲಕ ಹತ್ಯೆ ಮಾಡಿದವರ ವಿರುದ್ಧ ವನ್ಯಜಿವಿ ಸಂಕ್ಷರಣೆ ಕಾಯ್ದೆಯಂತೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸ್ಥಳಿಯರ ಆಗ್ರಹವಾಗಿದೆ.