ಮಕ್ಕಳ ಚಲನವಲನಗಳ ಬಗ್ಗೆ ನಿಗಾವಹಿಸಿ

ಸೋನು ಲಂಬಾಣಿ
ಸೋನು ಲಂಬಾಣಿ
Published on

ಹಗರಿಬೊಮ್ಮನಹಳ್ಳಿ: ಪಟ್ಟಣ ಸೇರಿದಂತೆ ಸುತ್ತಲಿನ ಹಳ್ಳಿಗಳ ಮುಗ್ದ ಶ್ರೀಮಂತ ಯುವಕರನ್ನು ನೆರೆ ರಾಜ್ಯ ನೇಪಾಳಕ್ಕೆ ಕರೆದೊಯ್ಯುವ ಗ್ಯಾಂಗ್ ಇದ್ದು, ಅಲ್ಲಿಗೆ ಹೋಗುವ ಅಮಾಯಕರು ಸಾಲಗಾರರಾಗಿ ಪ್ರಾಣವನ್ನು ಕೈಯಲ್ಲಿ ಹಿಡಿದು ಬದುಕುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಚಿತ್ರದುರ್ಗದ ಸೇವಾಲಾಲ್ ಬಂಜಾರ ಗುರುಪೀಠ ಟ್ರಸ್ಟ್ ಅಧ್ಯಕ್ಷ ಸೋನು ಲಂಬಾಣಿ ಆರೋಪಿಸಿದರು.

ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆನ್‌ಲೈನ್ ಜೂಜಾಟ, ಚಂದದ ಹುಡುಗಿಯರನ್ನು ತೋರಿಸುತ್ತಾ, ಖರ್ಚು ನಮ್ಮದೇ ನೀವು ಬರುವುದಷ್ಟೇ ಎಂದು ಹೇಳಿ ಕೆಡ್ಡ ತೋಡುತ್ತಾರೆ. ಇತ್ತಿಚೇಗೆ ಇಂಥ ಘಟನೆಗಳು ಹೆಚ್ಚಾಗಿದ್ದು ಜೀವಕ್ಕೆ ಅಪಾಯ ತಂಕೊಳ್ಳುವ ಕಾಲ ಸಮೀಪಿಸಿದೆ. ಆದ್ದರಿಂದ ಎಚ್ಚೆತ್ತುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಂಡು ಮಟ್ಟ ಹಾಕಬೇಕೆಂದು ವಿಜಯನಗರ ಎಸ್‌ಪಿಗೆ ಮನವಿ ಮಾಡಲಾಗಿದೆ ಎಂದರು. ಇದಕ್ಕೆ ಭರತ್ ಎನ್ನುವವರು ಕಾರಣರಾಗಿದ್ದು, ಇದರಲ್ಲಿ ಮಾಜಿ ಶಾಸಕ ಎಸ್.ಭೀಮಾನಾಯ್ಕರ ಪಾಲು ಇದೆ ಎಂದು ಸಂಶಯ ವ್ಯಕ್ತಪಡಿಸಿದರು. ಪಾಲಕರು ಮಕ್ಕಳ ಚಲನವಲನಗಳ ಬಗ್ಗೆ ನಿಗಾ ಇರಲಿ ಎಂದು ಕಿವಿಮಾತು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net