More

    ಆನ್‌ಲೈನ್‌ ಜೂಜಾಟಕ್ಕೆ ನಿಷೇಧ ಹೇರಿದ ತಮಿಳುನಾಡು ಸರ್ಕಾರ!

    ಚೆನ್ನೈ: ಆನ್‌ಲೈನ್‌ ಜೂಜಾಟಕ್ಕೆ ನಿಷೇಧ ಹೇರುವ ಮಸೂದೆಯನ್ನು ತಮಿಳುನಾಡು ವಿಧಾನಸಭೆಯಲ್ಲಿ ಗುರುವಾರ ಮತ್ತೊಮ್ಮೆ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ರಾಜ್ಯಪಾಲ ಆರ್‌. ಎನ್‌. ರವಿ ಅವರು, ಮಸೂದೆಯನ್ನು ಮರುಪರಿಶೀಲಿಸುವಂತೆ ಸರ್ಕಾರಕ್ಕೆ ವಾಪಸ್‌ ಕಳುಹಿಸಿದ ಹಿನ್ನೆಲೆಯಲ್ಲಿ ಮತ್ತೆ ಅಂಗೀಕರಿಸಲಾಗಿದೆ.

    ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮಸೂದೆಯನ್ನು ಮಂಡಿಸಿದ್ದು ಈ ಸಂದರ್ಭ ಆನ್‌ಲೈನ್‌ ಜೂಜಾಟದಿಂದ ಹಣ ಕಳೆದುಕೊಂಡು ಹಲವು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು ಯಾವೆಲ್ಲಾ ರೀತಿಯಲ್ಲಿ ಕುಟುಂಬಗಳು ನಾಶವಾಗುತ್ತದೆ ಎನ್ನುವುದನ್ನು ಉಲ್ಲೇಖಿಸಿದ್ದರು. ಮಸೂದೆಯನ್ನು ಬೆಂಬಲಿಸಿದ ಹಲವು ಸದಸ್ಯರು ರಾಜ್ಯಪಾಲರ ನಡೆಗೆ ವಿರೋಧ ವ್ಯಕ್ತಪಡಿಸಿದರು.

    ಅದಾದ ಬಳಿಕ ಸಭಾಧ್ಯಕ್ಷ ಎಂ.ಅಪ್ಪಾವು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿರುವುದಾಗಿ ಘೋಷಿಸಿದರು. ವಿರೋಧ ಪಕ್ಷ ಎಐಎಡಿಎಂಕೆ ನಾಯಕತ್ವದಲ್ಲಿ ಒಡಕು ಮೂಡಿದ್ದು ಇದೇ ವೇಳೆ ಸದನದಲ್ಲಿ ಬಹಿರಂಗಗೊಂಡಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts