ಈಕೆಯ ಬಲೆಗೆ ಬಿದ್ದ 10ಕ್ಕೂ ಹೆಚ್ಚು ಮಂದಿಗೆ ಎದುರಾಯ್ತು ಭಾರಿ ಸಂಕಷ್ಟ!

accused preeti
Published on

ದಾವಣಗೆರೆ: ಇಲ್ಲೊಬ್ಬ ಖತರ್ನಾಕ್​ ಮಹಿಳೆ ಸೈಟ್​ ಮಾರಾಟದ ನೆಪದಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಪೀಕಿದ್ದು, ಈಕೆಯ ವಿರುದ್ಧ ಕೇಸ್​ ದಾಖಲಾಗಿದೆ.

ಪ್ರೀತಿ ಬನ್ನಿಕಟ್ಟಿ (40) ಆರೋಪಿ. ತನ್ನ ಹೆಸರಲ್ಲಿದ್ದ ಸೈಟ್ ಮಾರಾಟ ಮಾಡುವುದಾಗಿ ಗ್ರಾಹಕರಿಗೆ ಬಲೆ ಬೀಸುತ್ತಿದ್ದ ಪ್ರೀತಿ ಬನ್ನಿಕಟ್ಟಿ, 10ಕ್ಕೂ ಹೆಚ್ಚು ಜನರಿಂದ ಹಣ ಪಡೆದು ವಂಚಿಸಿದ್ದಾಳೆ. ಮನೆ ಮನೆಗೆ ಹೋಗಿ ಪ್ರತ್ಯೇಕವಾಗಿ ವ್ಯವಹಾರ ಕುದುರಿಸುತ್ತಿದ್ದ ಆರೋಪಿ, ಮಹಿಳೆಯರಿಂದ ಹಣ ಪಡೆದು ಸೈಟ್​ ರಿಜಿಸ್ಟ್ರಾರ್​ ಮಾಡಿ ಕೊಡುತ್ತಿರಲಿಲ್ಲ.

ಇದೇ ರೀತಿ ಶೈಲಜಾ ಎಂಬುವವರಿಗೆ ಸೈಟ್ ತೋರಿಸಿ 15 ಲಕ್ಷ ರೂಪಾಯಿ ಪಡೆದು ಪ್ರೀತಿ ಮೋಸ ಮಾಡಿದ್ದಳು. ಈ ಬಗ್ಗೆ ಶೈಲಜಾ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ಬಯಲಾಗಿದೆ.

ಸೀರೆ ವ್ಯಾಪಾರ ಮಾಡುತ್ತಿದ್ದ ಮಹಿಳೆಯಿಂದಲೂ 6 ಲಕ್ಷ ರೂ. ಸಾಲ ಪಡೆದು ಅವರಿಗೂ ಪ್ರೀತಿ ವಂಚಿಸಿದ್ದಾಳೆ ಎಂದು ಆರೋಪಿಸಿಲಾಗಿದೆ. ಚೆಕ್ ನೀಡಿ ಹಣ ಪಡೆಯುತ್ತಿದ್ದ ಪ್ರೀತಿ ಕೊನೆಗೆ ವಾಪಸ್​ ಕೊಡುತ್ತಿರಲಿಲ್ಲ. ಅಕೌಂಟ್​ನಲ್ಲೂ ಹಣ ಇರುತ್ತಿರಲಿಲ್ಲ ಎಂದು ಮೋಸ ಹೋದ ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಪೊಲೀಸರು ಪ್ರೀತಿಯನ್ನು ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net