More

    ಮದುವೆಗೆ ವಧು-ವರ ಹುಡುಕುವ ಮುನ್ನ ಎಚ್ಚರ! ನಿಮ್ಮ ಲೈಫ್​ಗೆ ಈ ಗ್ಯಾಂಗ್ ಎಂಟ್ರಿಕೊಟ್ರೆ ಮುಗಿದೇ ಹೋಯ್ತು…​

    ಬೆಂಗಳೂರು: ಮದುವೆ ಆಗಲು ವಧು-ವರ ಹುಡುಕಾಟಕ್ಕೆ ಮುಂದಾಗುವ ಮುನ್ನ ಜೋಕೆ! ಮದುವೆ ಹೆಸರಲ್ಲಿ ವಂಚಿಸುವ ಗ್ಯಾಂಗ್​ ನಗರದಲ್ಲಿ ಅಡಗಿದೆ. ಶಾದಿ ಕಾಟ್ ಕಾಮ್, ಮ್ಯಾಟ್ರಿಮೋನಿಯಲ್ ಜಾಲತಾಣದಲ್ಲಿ ಪ್ರೊಫೈಲ್​ ಅಪ್​ಲೋಡ್​ ಮಾಡಿ ಅಮಾಯಕರ ಪರಿಚಯ ಮಾಡಿಕೊಡು ವಂಚಿಸುತ್ತಿರುವ ಪ್ರಕರಣ ಹೆಚ್ಚುತ್ತಲೇ ಇದೆ. ಈ ಗ್ಯಾಂಗ್​ನ ಪ್ರಮುಖ ಆರೋಪಿ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದು, ಈತನ ಸಹಚರನೊಬ್ಬ ಸಿಕ್ಕಿಬಿದ್ದಿದ್ದಾನೆ.

    ನೈಜಿರಿಯಾ ಮೂಲದ ಬ್ರೈಟ್ (25) ಬಂಧಿತ. ಶಾದಿ ಡಾಟ್ ಕಾಂನಲ್ಲಿ ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ 24.50 ಲಕ್ಷ ರೂ. ವಂಚಿಸಿದ್ದ ಈತನನ್ನು ನವದೆಹಲಿಯಲ್ಲಿ ಬಂಧಿಸಿ ಟ್ರ್ಯಾಸಿಟ್ ವಾರಂಟ್ ಮೇಲೆ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗಿದೆ. ಈತನ ಬಂಧನದಿಂದ 10 ಪ್ರಕರಣಗಳು ಬೆಳಕಿಗೆ ಬಂದಿದ್ದು, 7.50 ಲಕ್ಷ ರೂ. ಜಪ್ತಿ ಮಾಡಿರುವುದಾಗಿ ವೈಟ್‌ಫೀಲ್ಡ್ ಉಪ ವಿಭಾಗ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

    ವೈಟ್‌ಫೀಲ್ಡ್ ನಿವಾಸಿ ವಿದುಶಿ ಎಂಬಾಕೆ ಮದುವೆ ಆಗುವ ಸಲುವಾಗಿ ಶಾದಿ ಡಾಟ್ ಕಾಂನಲ್ಲಿ ಹುಡುಗನ ಹುಡುಕಾಟ ನಡೆಸುತ್ತಿದ್ದಾಗ ಸ್ವೈನ್ ರಾಜ್ ಕಿಶೋರ್ ಎಂಬಾತ ಪರಿಚಯ ಆಗಿದ್ದ. ಇಂಗ್ಲೆಂಡ್‌ನಲ್ಲಿ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದು, ಭಾರತಕ್ಕೆ ಹಿಂತಿರುಗಿದ ಮೇಲೆ ಮದುವೆ ಆಗುವುದಾಗಿ ನಂಬಿಸಿ ಪಿಎಚ್‌ಡಿ ಪೂರ್ಣ ಆಗಬೇಕಾದರೆ ನನಗೆ ಹಣ ಬೇಕಾಗಿದೆ. ಈಗ ಕೊಟ್ಟರೆ ಭಾರತಕ್ಕೆ ಬಂದ ಮೇಲೆ ಹಿಂತಿರುಗಿಸುವುದಾಗಿ ಹೇಳಿ ಮೊದಲು 5 ಲಕ್ಷ ರೂಪಾಯಿಯನ್ನು ತನ್ನ ಬ್ಯಾಂಕ್ ಖಾತೆಗೆ ಜಮೆ ಮಾಡಿಕೊಂಡಿದ್ದ.

    ಮದುವೆಗೆ ವಧು-ವರ ಹುಡುಕುವ ಮುನ್ನ ಎಚ್ಚರ! ನಿಮ್ಮ ಲೈಫ್​ಗೆ ಈ ಗ್ಯಾಂಗ್ ಎಂಟ್ರಿಕೊಟ್ರೆ ಮುಗಿದೇ ಹೋಯ್ತು...​
    ಬಂಧಿತ ಆರೋಪಿ ಬ್ರೈಟ್

    ಇದಾದ ಮೇಲೆ ಸ್ಕಾಟ್‌ಲ್ಯಾಂಡ್ ಬ್ಯಾಂಕ್ ಖಾತೆಯಲ್ಲಿ ನನ್ನ ಹಣವಿದ್ದು, ಸೆಕ್ಯೂರಿಟಿ ಕಾರಣಕ್ಕೆ ಡ್ರಾ ಮಾಡಲು ಸಾಧ್ಯವಾಗುತ್ತಿಲ್ಲ. ವ್ಯಾಸಂಗಕ್ಕಾಗಿ ಮತ್ತಷ್ಟು ಹಣ ಬೇಕೆಂದು ಹಂತ ಹಂತವಾಗಿ 24.50 ಲಕ್ಷ ರೂ. ಜಮೆ ಮಾಡಿಕೊಂಡು ವಂಚನೆ ಮಾಡಿದ್ದ.

    ನೊಂದ ವಿದುಶಿ, ವೈಟ್‌ಫೀಲ್ಡ್ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಗುರುಪ್ರಸಾದ್ ನೇತೃತ್ವದ ತಂಡ ದೂರುದಾರರ ಜತೆ ಸಂಭಾಷಣೆ ನಡೆಸಿದ್ದ ಮೊಬೈಲ್ ನಂಬರ್ ಆಧರಿಸಿ ದೆಹಲಿಗೆ ತೆರಳಿ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು.

    ನ.23ರಂದು ನವದೆಹಲಿ ಉತ್ತಮ ನಗರದಲ್ಲಿ ಆರೋಪಿಯನ್ನು ಬಂಧಿಸಿ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಕೃತ್ಯಕ್ಕೆ ಬಳಸಿದ್ದ 4 ಲ್ಯಾಪ್‌ಟಾಪ್, 10 ಮೊಬೈಲ್ ಜಪ್ತಿ ಮಾಡಲಾಗಿದೆ. ಲ್ಯಾಪ್‌ಟಾಪ್ ಪರಿಶೀಲನೆ ವೇಳೆ ದೇಶದ ವಿವಿಧ ಬ್ಯಾಂಕ್‌ಗಳಲ್ಲಿ 38 ಖಾತೆಗಳು ಮತ್ತು ವಿದೇಶದಲ್ಲಿ 28 ಖಾತೆ ತೆರೆದಿರುವುದು ಬೆಳಕಿಗೆ ಬಂದಿವೆ. ಪಾಸ್‌ಪೋರ್ಟ್ ಮತ್ತು ವೀಸಾ ಪತ್ತೆಯಾಗಿಲ್ಲ ಎಂದು ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

    ವಂಚಕ ಗ್ಯಾಂಗ್​ನ ಪ್ರಮುಖ ಆರೋಪಿ ಇಂಗ್ಲೆಂಡ್‌ನಲ್ಲಿ ನೆಲೆಸಿದ್ದು, ಆತ ಅಮಾಯಕ ಹೆಣ್ಣು ಮಕ್ಕಳ ಜತೆ ಸ್ನೇಹ ಬೆಳಸಿ ಮದುವೆ ಅಥವಾ ಗ್ರೀಟಿಂಗ್​ ಕಳುಹಿಸುವ ನೆಪದಲ್ಲಿ ಬಲೆ ಬೀಸುತ್ತಿದ್ದ. ಅದಕ್ಕೆ ಬೇಕಾದ ಬ್ಯಾಂಕ್ ಖಾತೆ ಮತ್ತು ನಕಲಿ ಗಿಫ್ಟ್ ಬಾಕ್ಸ್‌ಗಳನ್ನು ಸಿದ್ಧಪಡಿಸಲು ಬೆಂಗಳೂರು, ದೆಹಲಿಯಲ್ಲಿ ಉಳಿದವರು ಅಡಗಿದ್ದಾರೆ. ಇಂಗ್ಲೆಂಡ್‌ನಿಂದ ವಂಚಕ, ಅಮಾಯಕ ಹೆಣ್ಣು ಮಕ್ಕಳಿಗೆ ಯಾಮಾರಿಸಿ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಿಸಿದಾಗ ಅದನ್ನು ಡ್ರಾ ಮಾಡಿಕೊಳ್ಳುತ್ತಿದ್ದರು. ಇದೇ ರೀತಿ ಹಲವರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ವೈಟ್‌ಫೀಲ್ಡ್ ಸಿಇಎನ್ ಠಾಣೆಯಲ್ಲಿಯೇ 10 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿವಾಹ ಅನ್ವೇಷಣೆ ಜಾಲತಾಣದಲ್ಲಿ ಪರಿಚಯ ಆಗುವ ವರ&ವಧುವಿನ ಜತೆಗೆ ಮುಖಾಮುಖಿ ಭೇಟಿಯಾಗಿ ನಂಬಿಕೆ ಬಂದ ಮೇಲೆ ವ್ಯವಹಾರ ನಡೆಸಿ. ಕೇವಲ ಮೊಬೈಲ್​ ಸಂಭಾಷಣೆ, ಚಾಟಿಂಗ್​ಗೆ ಮರುಳಾಗಬೇಡಿ ಎಂದು ವೈಟ್​ಫೀಲ್ಡ್​ ಉಪವಿಭಾಗ ಡಿಸಿಪಿ
    ದೇವರಾಜ್​ ಸಲಹೆ ನೀಡಿದ್ದಾರೆ.

    ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

    ತನ್ನ ಮನೆಯಲ್ಲೇ ಭಾವಿ ಪತಿಗೆ ಮಲಗಲು ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಕಾದಿತ್ತು ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts