ಮಠಗಳು ಸನ್ಮಾರ್ಗ ತೋರುವ ದಾರಿದೀಪಗಳು

11-DVD-1
ಗಬ್ಬೂರು ಸಮೀಪದ ಸುಲ್ತಾನಪುರ ಮಠದಲ್ಲಿ ಆಯೋಜಿಸಿದ್ದ ಮೌನಾನುಷ್ಠಾನ ಮಂಗಲ ಹಾಗೂ ತುಲಾಭಾರ ಸೇವೆ, ಧರ್ಮಸಭೆ ಕಾರ್ಯಕ್ರಮವನ್ನು ಶ್ರೀ ಶಂಭು ಸೋಮನಾಥ ಶಿವಾಚಾರ್ಯರು ಉದ್ಘಾಟಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಶರಣಗೌಡ ಜೋಳದಹೆಡಗಿ, ನಿವೃತ್ತ ಪ್ರಾಚಾರ್ಯ ಪರಮೇಶ್ವರ ಸಾಲಿಮಠ, ಪ್ರಮುಖರಾದ ಪಂಚಯ್ಯಸ್ವಾಮಿ ಕಂಬಿ, ಶಿವಪ್ಪ ನಾಯಕ ಇತರರಿದ್ದರು.
Published on

ದೇವದುರ್ಗ: ಹರಮುನಿದರೆ ಗುರು ಕಾಯುವನು. ಗುರುವಿಗೆ ಅಂಥ ಶಕ್ತಿ ಸಾಮರ್ಥ್ಯವಿರುತ್ತದೆ. ಧಾರ್ಮಿಕ ಕಾರ್ಯಕ್ರಮ ಮೂಲಕ ಭಕ್ತರಿಗೆ ಸನ್ಮಾರ್ಗ ತೋರುವ ಮಠಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ರಾಜಯೋಗಿನಿ ಸ್ಮಿತಾ ಅಕ್ಕ ಹೇಳಿದರು.

ಗಬ್ಬೂರು ಸಮೀಪದ ಸುಲ್ತಾನಪುರ ಶ್ರೀ ಪಂಚಾಕ್ಷರಿ ಬೃಹನ್ಮಠದಲ್ಲಿ ಶ್ರೀ ಶಂಭು ಸೋಮನಾಥ ಶಿವಾಚಾರ್ಯರ ಮೌನಾನುಷ್ಠಾನ ಮಂಗಲ ಹಾಗೂ ತುಲಾಭಾರ ಸೇವೆ, ಧರ್ಮಸಭೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ಸುಲ್ತಾನಪುರ ಮಠಕ್ಕೆ ಉತ್ತಮ ಗುರು ದೊರೆತಿರುವುದು ಭಕ್ತರ ಸೌಭಾಗ್ಯ. ವಿವಿಧ ಧಾರ್ಮಿಕ ಕಾರ್ಯಕ್ರಮ ಮೂಲಕ ಭಕ್ತರಿಗೆ ಸನ್ಮಾರ್ಗ ತೋರುತ್ತಿದ್ದಾರೆ. ಗುರುಗಳು ನಮ್ಮಲ್ಲಿರುವ ಅಜ್ಞಾನದ ಅಂಧಕಾರ ತೊಲಗಿಸಿ ಸುಜ್ಞಾನ ನೀಡಿ ಸನ್ಮಾರ್ಗ ತೋರುತ್ತಾರೆ.

ಸಂಸಾರ ಎಂದ ಮೇಲೆ ಸಮಸ್ಯೆಗಳು ಬರುವುದು ಸಹಜ. ಅವುಗಳನ್ನು ಗುರುವಿನ ಮಾರ್ಗದರ್ಶನದಲ್ಲಿ ಪರಿಹರಿಸಿಕೊಳ್ಳಬೇಕು. ಸುಲ್ತಾನಪುರಮಠ ಈ ಭಾಗ್ಯದ ಬೆಳಕಾಗಿದ್ದು ಭಕ್ತರನ್ನು ಅಧ್ಯಾತ್ಮದ ಜತೆಗೆ ಸಂಸ್ಕಾರಯುತ ನಾಗರಿಕರನ್ನಾಗಿ ಮಾಡುತ್ತಾರೆ. ಎಲ್ಲರೂ ಶ್ರೀಮಠ ತೋರುವ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.

ಶ್ರೀ ಶಂಭು ಸೋಮನಾಥ ಶಿವಾಚಾರ್ಯರು, ಬಿಜೆಪಿ ತಾಲೂಕು ಅಧ್ಯಕ್ಷ ಶರಣಗೌಡ ಜೋಳದಹೆಡಗಿ, ನಿವೃತ್ತ ಪ್ರಾಚಾರ್ಯ ಪರಮೇಶ್ವರ ಸಾಲಿಮಠ, ಪ್ರಮುಖರಾದ ಪಂಚಯ್ಯಸ್ವಾಮಿ ಕಂಬಿ, ಶಿವಪ್ಪ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net