ಗುರುವಿನ ಸ್ಥಾನ ಮಹೋನ್ನತ

hdl-1
ಹೂವಿನಡಹಗಲಿ ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಕೈಗೊಂಡಿದ್ದ ಮೌನ ಅನುಷ್ಠಾನ ಮಂಗಳೋತ್ಸವ ಹಾಗೂ ಶಿವಾನುಭವ ಕಾರ್ಯಕ್ರಮವನ್ನು ಶಾಸಕಿ ಅನ್ನಪೂರ್ಣ ತುಕಾರಾಮ್ ಉದ್ಘಾಟಿಸಿದರು ಡಾ.ಅನ್ನದಾನೇಶ್ವರ ಸ್ವಾಮೀಜಿ, ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ, ಗ್ರಾ.ಪಂ ಅಧ್ಯಕ್ಷೆ ಜಾನಕಮ್ಮ ತಳವಾರ ಇತರರಿದ್ದರು.
Published on

ಹೂವಿನಹಡಗಲಿ: ಈ ನಾಡಿನ ಮಠ-ಮಾನ್ಯಗಳು, ಶರಣರು ಅಕ್ಷರ ಮತ್ತು ಅನ್ನದಾಸೋಹದ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ ಎಂದು ಶಾಸಕಿ ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.

ಸುಕ್ಷೇತ್ರ ಮೈಲಾರದ ಶ್ರೀ ಬಸವಲಿಂಗ ಶರಣರ ಗುರುಕರುಣ ತ್ರಿವಿಧ ಮಂಗಲ ಭವನದಲ್ಲಿ ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ಕೈಗೊಂಡಿದ್ದ ಮೌನ ಅನುಷ್ಠಾನ ಮಂಗಳೋತ್ಸವ ಹಾಗೂ ಶಿವಾನುಭವ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.

ನಮ್ಮ ಇಂದ್ರಿಯಗಳನ್ನು ನಿಗ್ರಹಿಸಿ ಶುದ್ಧ ಮನೋಭಾವದಿಂದ ಭಗವಂತನ ಸ್ಮರಣೆ ಮಾಡುವುದೇ ಅನುಷ್ಠಾನವಾಗಿದೆ. ಇತಿಹಾಸ ಗಮನಿಸಿದಾಗ ಶರಣರು ಎಲ್ಲ ವರ್ಗದ ಜನರಿಗೆ ಸಮಾನ ಅವಕಾಶ ಕಲ್ಪಿಸುವ ಕೆಲಸ ಮಾಡಿದ್ದಾರೆ. ಗುರುವಿನ ಸ್ಥಾನ ಮಹೋನ್ನತವಾಗಿದ್ದು, ಶಿಷ್ಯವರ್ಗವು ಭಕ್ತಿಯಿಂದ ಗುರುವಿನ ಮಹಾತ್ಮೆಯನ್ನು ಜಗತ್ತಿಗೆ ತಿಳಿಸಬೇಕಾಗಿದೆ ಎಂದರು.

ಮಾಜಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ಚನ್ನವೀರ ಸ್ವಾಮೀಜಿ ಅನುಷ್ಠಾನ ಮಾಡಿ ಲೋಕಕಲ್ಯಾಣ ಮಾಡುವುದರ ಜತೆಗೆ ಜಮೀನುಗಳಲ್ಲಿ ನೇಗಿಲನ್ನು ಹೊರುವ ಮೂಲಕ ಉತ್ತಮ ರೈತರಾಗಿದ್ದಾರೆ ಎಂದರು.

ಶ್ರೀ ಚನ್ನವೀರ ಸ್ವಾಮೀಜಿ ಮಾತನಾಡಿ, ಮಠ-ಮಾನ್ಯಗಳು ಸಮಾಜಮುಖಿ ಕೆಲಸ ಮಾಡಲು ಭಕ್ತರು ಹಾಗೂ ದಾನಿಗಳ ಸಹಾಯ ಮುಖ್ಯವಾಗಿದೆ. ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ಅವಕಾಶಗಳು ದೊರಕಿಸುವುದು ಮಠಗಳ ಮುಖ್ಯ ಉದ್ದೇಶ ಎಂದರು.

ಮುಂಡರಗಿ ಅನ್ನದಾನೇಶ್ವರ ಮಠದ ನಾಡೋಜ ಡಾ.ಅನ್ನದಾನೇಶ್ವರ ಸ್ವಾಮೀಜಿ, ಹೊಳೆ ಇಟಗಿಯ ಮಡಿವಾಳೇಶ್ವರ ಸ್ವಾಮೀಜಿ, ಗುತ್ತಲ ಕಲ್ಮಠದ ಗುರುಸಿದ್ದ ಸ್ವಾಮೀಜಿ, ನೀಲಗುಂದ ಚನ್ನಬಸವ ಸ್ವಾಮೀಜಿ, ಹೊಳಲಿನ ಚನ್ನಬಸವ ಸ್ವಾಮೀಜಿ, ಗ್ರಾ.ಪಂ ಅಧ್ಯಕ್ಷೆ ಜಾನಕಮ್ಮ ತಳವಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net