

ಗಂಡಸಿ: ಮುದುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮೋಕ್ಷಾ ಆಯ್ಕೆಯಾದರು.
ಗೊಲ್ಲರಹಳ್ಳಿ ನಾಗೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಶಂಕರಾಪುರದ ಮೋಕ್ಷಾ, ಚೀರನಹಳ್ಳಿ ರಂಗಸ್ವಾಮಿ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಮೋಕ್ಷಾ 9 ಮತಗಳನ್ನು ಪಡೆದು ಜಯ ಗಳಿಸಿದರೆ ರಂಗಸ್ವಾಮಿ 4 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣಾಧಿಕಾರಿಯಾಗಿ ಇಒ ನಾಗರಾಜು ಕಾರ್ಯನಿರ್ವಹಿಸಿದರು.
ಉಪಾಧ್ಯಕ್ಷೆ ಭವ್ಯಾ, ಪಿಡಿಒ ಬಾಲಕೃಷ್ಣನಾಯಕ್, ಸದಸ್ಯರಾದ ವಿನೋದಾ, ಐಶ್ವರ್ಯಾ, ಮೋಹನ್ ನಾಯಕ್, ಮಹಾಲಕ್ಷ್ಮೀಬಾಯಿ, ಪ್ರಕಾಶ್, ಸೋಮಶೇಖರ್, ರಂಜಿತಾ, ಭಾರತೀ, ಚಂದ್ರಶೇಖರ್, ಗ್ರಾಪಂ ಸಿಬ್ಬಂದಿ ಹಾಜರಿದ್ದರು.