ಮೋಕಾ ಮಲ್ಲೇಶ್ವರ ದೇವಸ್ಥಾನಕ್ಕೆ ಸಚಿವ ನಾಗೇಂದ್ರ ಭೇಟಿ

Ballari Nagendra
Published on

ಬಳ್ಳಾರಿ: ಮೋಕಾ ಗ್ರಾಮದ ಆರಾಧ್ಯ ದೈವ ಕ್ಷೇತ್ರನಾಥ ಮುದಿ ಮಲ್ಲೇಶ್ವರ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಸೋಮವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಉತ್ತಮ ಮಳೆ ಬೆಳೆ, ಜಲಾಶಯಗಳು ಭರ್ತಿಯಾಗಲಿ ಎಂದು ಪ್ರಾರ್ಥಿಸಿದರು. ನಂತರ ಹೊಸ ಮೋಕಾ ಗ್ರಾಮದ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯಲ್ಲಿ ನೂತನ ಕೊಠಡಿ ಹಾಗೂ ಆಡಿಟೋರಿಯಂ ಹಾಲ್ ಉದ್ಘಾಟಿಸಿದರು.

ಪಾಲಿಕೆ ಮೇಯರ್ ಡಿ.ತ್ರಿವೇಣಿ, ಪ್ರಮುಖ ಮುಖಂಡ ಸತ್ಯನಾರಾಯಣರೆಡ್ಡಿ, ಮೋಕಾ ಗ್ರಾಪಂ ಅಧ್ಯಕ್ಷ ರಾಮಣ್ಣ, ಎಸ್ಡಿಎಂಸಿ ಅಧ್ಯಕ್ಷ ಮಹೇಶ್, ಮುಖಂಡರಾದ ಬಿ.ವೆಂಕಟೇಶ್ ಪ್ರಸಾದ್, ಅಣ್ಣಾ ನಾಗರಾಜ್, ಗೋವರ್ಧನರೆಡ್ಡಿ, ಗೋನಾಳ್ ವಿರೂಪಾಕ್ಷಗೌಡ, ಜಾನೆಕುಂಟೆ ಬಸವರಾಜ್, ಮುದಿ ಮಲ್ಲಯ್ಯ, ಮೋಕಾ ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net