

ಶ್ರೀರಂಗಪಟ್ಟಣ: ತಾಲೂಕಿನ ದರಸಗುಪ್ಪೆ ಗ್ರಾಮ ಪಂಚಾಯಿತಿ ನೂತನ ಉಪಾಧ್ಯಕ್ಷರಾಗಿ ಮೋಹನ್ ಕುಮಾರ್ ಅವಿರೋಧ ಆಯ್ಕೆಯಾದರು.
ಶ್ರೀಧರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಮೋಹನ್ ಕುಮಾರ್ ಒಬ್ಬರೇ ನಾಮಪತ್ರ ಸಲ್ಲಸಿದ್ದರು. ಹಾಗಾಗಿ ಚುನಾವಣಾಧಿಕಾರಿ ನಾಗೇಂದ್ರ ಅವಿರೋಧ ಆಯ್ಕೆ ಘೋಷಿಸಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪ್ರಾಣೇಶ್, ಮಾಜಿ ಅಧ್ಯಕ್ಷ ಆರ್.ಎನ್.ಗುರುಪ್ರಸಾದ್, ಗ್ರಾಪಂ ಅಧ್ಯಕ್ಷೆ ರಂಜಿನಿ ವಿಶ್ವನಾಥ್, ಸದಸ್ಯರಾದ ಶ್ರೀಧರ್, ರಾಮಚಂದ್ರ, ಶಿವಕುಮಾರ್, ಶಿವಮ್ಮ, ಸರಿತಾ, ಮಾಲತಿ, ದಾಕ್ಷಾಯಿಣಿ, ಕುಮಾರ್, ಮುಖಂಡರಾದ ರಾಮಚಂದ್ರಣ್ಣ, ರವೀಂದ್ರ, ವಿಜೇಂದ್ರ ಪುಟ್ಟು, ನಾರಾಯಣಪ್ಪ, ಚಂದ್ರಶೇಖರ್, ಸತೀಶ್, ಪಿಡಿಒ ಕೃಷ್ಣಪ್ಪಗೌಡ ಅಭಿನಂದಿಸಿದರು.