

ಸುಂಟಿಕೊಪ್ಪ: ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ 3ನೇ ದಿನದ ಪಂದ್ಯದಲ್ಲಿ ಮೊಗ್ರಲ್ ಎಫ್.ಸಿ.ಕುಂಬ್ಳೆ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.
ಜಿಎಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ ಯೂತ್ ಕ್ಲಬ್ ವತಿಯಿಂದ ಆಯೋಜಿಸಿರುವ 39ನೇ ವರ್ಷದ ಫುಟ್ಬಾಲ್ ಪಂದ್ಯದ ಭಾನುವಾರದ ಮೊದಲ ಪಂದ್ಯ ಮೊಗ್ರಲ್ ಎಫ್.ಸಿ ಕುಂಬ್ಳೆ ಹಾಗೂ ಸ್ವರ್ಣ ಎಫ್.ಸಿ.ಮಂಡ್ಯ ತಂಡಗಳ ನಡುವೆ ನಡೆಯಿತು. ಮೊಗ್ರಲ್ ಎಫ್.ಸಿ ಕುಂಬ್ಳೆ ತಂಡ ಮೊದಲಾರ್ಧದಲ್ಲಿ 13ನೇ ನಿಮೀಷದಲ್ಲಿ ಅಬಿದ್ ಒಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು.
ದ್ವೀತಿಯಾರ್ಧದಲ್ಲಿ 2ನೇ ನಿಮೀಷದಲ್ಲಿ ಮೊಗ್ರಲ್ ಎಫ್.ಸಿ ಕುಂಬ್ಳೆ ಅಭೀದ್ ಮತ್ತೊಂದು ಗೋಲುಗಳಿಸುವ ಮೂಲಕ ಎದುರಾಳಿ ತಂಡಕ್ಕೆ ಒತ್ತಡ ಹೆಚ್ಚಿಸಿದರು. ಮತ್ತೆ ಮೊಗ್ರಲ್ ಎಫ್.ಸಿ ಕುಂಬ್ಳೆ ತಂಡದ ಆಟಗಾರ 13ನೇ ನಿಮೀಷದಲ್ಲಿ ನಿಶಾದ್ ಮತ್ತೊಂದು ಗೋಲು ಬಾರಿಸುವ ಗಳಿಸುವ ಮೂಲಕ ಎದುರಾಳಿ ತಂಡಕ್ಕೆ ಮತ್ತಷ್ಟು ಒತ್ತಡ ನೀಡಿದರು. 17ನೇ ನಿಮೀಷದಲ್ಲಿ ರಶೀದ್ 1ಗೋಲುಗಳಿಸುವ ಮೂಲಕ ಎದುರಾಳಿ ತಂಡವನ್ನು 4-0 ಗೋಲುಗಳಿಂದ ಮಂಡ್ಯ ತಂಡವನ್ನು ಸೋಲಿಸುವ ಮೂಲಕ ಮುಂದಿನ ಸುತ್ತಿಗೆ ಆರ್ಹತೆ ಪಡೆಯಿತು.
ದ್ವಿತೀಯ ಪಂದ್ಯ ಇಂಡಿಪೆಂಡೆಟ್ ಎಫ್.ಸಿ ಬೆಂಗಳೂರು ಹಾಗೂ ಮಂಗಳೂರು ಎಫ್.ಸಿ.ಮಂಗಳೂರು 2 ತಂಡಗಳು ಬಾರದ ಹಿನ್ನಲೆಯಲ್ಲಿ ಪಂದ್ಯವನ್ನು ರದ್ದುಗೊಳಿಸಲಾಯಿತು.
ನಿವೃತ್ತ ಯೋಧ ಮಧುಸೂಧನ್ ಪಂದ್ಯಕ್ಕೆ ಚಾಲನೆ ನೀಡಿದರು. ಉದ್ಯಮಿ ಅಬ್ಬಾಸ್ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಸೋಮನಾಥ್ ಇದ್ದರು.