ದಿಲ್ಲಿಗೆ ಕೇಳಲಿ ಜೈ ಭಜರಂಗ ಬಲಿ : ಮೋದಿ

Modi_Bhajarangi
Published on

ತುಮಕೂರು: ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆಗೆ ಪ್ರಧಾನಿ ನರೇಂದ್ರಮೋದಿ ತಮ್ಮ ಮಾತಿನಲ್ಲೇ ತಿವಿದರು.

ನಗರದಲ್ಲಿ ಶುಕ್ರವಾರ ಜಿಲ್ಲೆಯ 11 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದ ಆರಂಭದಲ್ಲಿ ಜೈ ಭಜರಂಗ ಬಲಿ ಎಂದು ಘೋಷಣೆ ಕೂಗಿದ ಮೋದಿ, ನಿಮ್ಮ ಧ್ವನಿ ದಿಲ್ಲಿಗೆ ಕೇಳಬೇಕು ಎಂದು ಮೂರು ಬಾರಿ ಜೈ ಭಜರಂಗ ಬಲಿ ಕೀ ಜೈ ಎಂದು ಕೂಗಿ ಸಭಾಂಗಣದಲ್ಲಿ ಹವಾ ಎಬ್ಬಿಸಿದರು. ಮೋದಿ, ಮೋದಿ ಜಯಘೋಷಗಳು ಮುಗಿಲುಮುಟ್ಟಿದವು. 30 ನಿಮಿಷಗಳಲ್ಲಿ ಜನರನ್ನು ಸೂಜಿಗಲ್ಲನಂತೆ ಆಕರ್ಷಿಸಿದ ಮೋದಿ ಭಾಷಣದ ನುಡುನಡುವೇ ಬಂಧು-ಭಗೀನಿಯರೇ, ಸ್ನೇಹಿತರೆ ಪದಗಳನ್ನು ಬಳಸಿ ಕನ್ನಡ ಸೊಗಡು ಸೇರಿಸಿದರು.

ಮೊಬೈಲ್ ಫ್ಲಾಶ್ ಲೈಟ್ ಬೆಳಗಿಸಿ

ಭಾಷಣದ ಕೊನೆಯಲ್ಲಿ ನನ್ನದೊಂದ ಪ್ರೀತಿಯ ವೈಯಕ್ತಿಕ ಅರಿಕೆಯೊಂದಿದೆ ಅದನ್ನು ನಡೆಸಿಕೊಡುವಿರಾ? ಎಲ್ಲರೂ ಮೊಬೈಲ್‌ನ ಫ್ಲಾಶ್ ಲೈಟ್ ಬೆಳಗಿಸುವಂತೆ ಕೋರಿ, ‘ಮನೆ ಮನೆಗೆ ಹೋಗಿ ಹೇಳಿ, ಮೋದಿ ಅವರು ತುಮಕೂರಿಗೆ ಬಂದಿದ್ದರು, ನಿಮಗೆ ನಮಸ್ಕಾರ ತಿಳಿಸಲು ಹೇಳಿದ್ದಾರೆ ಅಂತೆ’ ಆ ಮೂಲಕ ಅವರ ಕುಟುಂಬದ ಎಲ್ಲರ ಆಶೀರ್ವಾದ ನನಗೆ ಸಿಗಲಿದ್ದು ಇನ್ನಷ್ಟು ನಿಮ್ಮ ಸೇವೆಯನ್ನು ಮಾಡಲು ನನ್ನ ಆತ್ಮಬಲ ಹೆಚ್ಚಲಿದೆ ಎಂದು ಮೋದಿ ಹೇಳಿದರು. ಮೋದಿ ಮಾತಿಗೆ ಎಲ್ಲರು ತಲೆದೂಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net