ತಮಿಳುನಾಡು ಸಿಎಂ ಅಂತಿಮ ಕಾರ್ಯ ಮಾಡಿದ ಹೋರಾಟಗಾರರು

9407389d-707b-4bbf-9c58-126dd75030f7
Published on

ರಾಮನಗರ: ಕಾವೇರಿ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಕಸ್ತೂರಿ ಕರ್ಣಾಟಕ ಜನಪರ ವೇದಿಕೆ ಕಾರ್ಯಕರ್ತರು ತಲೆ ಬೋಳಿಸಿಕೊಂಡು ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ ಶ್ರಾದ್ಧಾ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. 

ಭಾನುವಾರ ಕನಕಪುರದ ಉಯ್ಯಂಬಳ್ಳಿ ಹೋಬಳಿಯಲ್ಲಿರುವ ಅರ್ಕಾವತಿ ಕಾವೇರಿ ನದಿಯ ಸಂಗಮದಲ್ಲಿ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ ತಲೆ ಬೋಳಿಸಿಕೊಂಡು, ಶ್ರಾದ್ಧಾ ನೆರವೇರಿಸಿ, ನದಿಯಲ್ಲಿ ಅಸ್ತಿ ವಿಸರ್ಜನೆ ಮಾಡಿದರು. 

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.  ಅಸ್ತಿ ಬಿಡುವ ಕಾರ್ಯ ನೆರವೇರಿಸಿದ ಕಾರ್ಯಕರ್ತರು, ಈ ವೇಳೆ ಸಂಘಟನೆಯ ಯೋಗೇಶ್​​ ಗೌಡ, ಮುಂತಾದವರು ಇದ್ದರು. 

ಕಾವೇರಿ ವಿಚಾರವಾಗಿ ಇತ್ತೀಚಿಗೆ ನಡೆದ ರಾಜ್ಯ ಬಂದ್ ವೇಳೆ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್​ಗೌಡ ಅವರ ನೇತೃತ್ವದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಅಂತ್ಯ ಸಂಸ್ಕಾರ ನೆರವೇರಿಸಿ ಪ್ರತಿಭಟನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ರಮೇಶ್​ಗೌಡ ಸೇರಿದಂತೆ ಹಲವರ ವಿರುದ್ಧ ರಾಮನಗರ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net