ಏಡ್ಸ್ ನಿಯಂತ್ರಣಾ ಕಾರ್ಯಕ್ರಮಕ್ಕೆ ಮೊಬೈಲ್ ವ್ಯಾನ್‌ಗಳ ಹಸ್ತಾಂತರ

Aids prevention - 2
Published on

ಬೆಂಗಳೂರು: ರಾಜ್ಯದಲ್ಲಿ ಏಡ್ಸ್ ನಿಯಂತ್ರಿಸಲು ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳ ಏಡ್ಸ್ ನಿಯಂತ್ರಣ ಘಟಕಗಳಿಗೆ ಆರೋಗ್ಯ ಇಲಾಖೆಯು ಮೊಬೈಲ್ ಐಸಿಟಿಸಿ ವ್ಯಾನ್‌ಗಳನ್ನು ಒದಗಿಸಿದೆ.

ನಗರದ ಆರೋಗ್ಯ ಸೌಧದ ಆವರಣದಲ್ಲಿ ಬುಧವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮೊಬೈಲ್ ವ್ಯಾನ್‌ಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಜಿಲ್ಲಾ ಘಟಕಗಳಿಗೆ ವಾಹನಗಳನ್ನು ಹಸ್ತಾಂತರಿಸಿದರು.

ಈ ವಾಹನಗಳು ತಾತ್ಕಾಲಿಕ ಕ್ಲಿನಿಕ್‌ಗಳ ರೀತಿಯಲ್ಲಿ ಕೆಲಸ ಮಾಡಲಿದ್ದು, 2030ರ ವೇಳಗೆ ಹೊಸ ಎಚ್‌ಐವಿ ಪ್ರಕಣಗಳು ವರದಿಯಾಗದಂತೆ ತಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿವೆ. ಎಚ್‌ಐವಿಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ ಇಲ್ಲಿ ನಿಯಮಿತ ಆರೋಗ್ಯ ತಪಾಸಣೆ, ಸಣ್ಣ ಕಾಯಿಲೆಗಳಿಗೆ ಆರೈಕೆ ಮತ್ತು ಗರ್ಭಿಣಿಯರಿಗೆ ಪ್ರಸವದ ಸಂದರ್ಭದಲ್ಲಿ ಬೇಕಾದ ಆರೈಕೆಯನ್ನು ನೀಡಲಾಗುತ್ತೆದೆ.

ಈ ವ್ಯಾನ್‌ಗಳ ಜೊತೆಗೆ ದ್ವಿಚಕ್ರವಾಗಳನ್ನು ಸಹ ಐಸಿಟಿಸಿ ಯೋಜನೆಗೆ ಬಳಸಿಕೊಳ್ಳಲಾಗುತ್ತಿದ್ದು, ವ್ಯಾನ್‌ಗಳು ತಲುಪಲಾಗದ ಸ್ಥಳ ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ಈ ಬೈಕ್‌ಗಳ ಮೂಲಕ ತೆರಳಿ ಸೇವೆ ಒದಗಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net