'ಮೊಬೈಲ್‌ನಲ್ಲಿ ಆಡಬೇಡ ಮಗಳೇ..' ಅಪ್ಪ ಅಮ್ಮನ ಬುದ್ಧಿ ಮಾತಿಗೆ ಮನನೊಂದ ಬಾಲಕಿ ಬಾವಿಗೆ ಹಾರಿ ಆತ್ಮಹತ್ಯೆ

sucide
Published on

ಪಡುಬಿದ್ರಿ: ಮೊಬೈಲ್‌ನಲ್ಲಿ ಆಟವಾಡದಂತೆ ಪಾಲಕರು ಬುದ್ಧಿಮಾತು ಹೇಳಿದ್ದರಿಂದ ಕೋಪಗೊಂಡ ಮಣಿಪುರ ಗ್ರಾಮದ ಬಾಲಕಿ ಸುಹೇಬತ್ ಅಸ್ಲಮೀಯಾ(16) ಶನಿವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಒರಟು ಸ್ವಭಾವ ಹೊಂದಿರುವ ಬಾಲಕಿ ಮೊಬೈಲ್‌ನಲ್ಲಿ ಆಟವಾಡುತ್ತಿರುವ ಬಗ್ಗೆ ತಂದೆ, ತಾಯಿ ಬುದ್ಧಿ ಹೇಳಿ ಮೊಬೈಲ್ ತೆಗೆದುಕೊಂಡಿದ್ದರು. ಅದರಿಂದ ಕೋಪಗೊಂಡು ಮನೆಯಲ್ಲಿದ್ದ ಬಾಲಕಿ, ಹೆತ್ತವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಹೊರಗೆ ಹೋಗಿ ಹತ್ತಿರದಲ್ಲಿರುವ ಸರ್ಕಾರಿ ಬಾವಿಗೆ ಹಾರಿದ್ದಾಳೆ. ಆಕೆ ನೀರಲ್ಲಿ ಮುಳುಗುತ್ತಿರುವುದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಅವಳನ್ನು ಮೇಲಕ್ಕೆತ್ತಿ ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ ಎಂದು ಪ್ರಕರಣ ದಾಖಲಿಸಿರುವ ಕಾಪು ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net