

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ನಗರದ ಆಳಂದ ರಸ್ತೆಯ ಖಾದ್ರಿ ಚೌಕ್ ಸಮೀಪದಲ್ಲಿರುವ ನಬಿ ಕಾಲನಿಯಲ್ಲಿ ವ್ಯಕ್ತಿಯೊಬ್ಬನನ್ನು ಮಾರಕಾಸ್ತçಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಕಳ್ಳತನವನ್ನು ಚಾಳಿಯನ್ನಾಗಿಸಿಕೊಂಡಿದ್ದ ವ್ಯಕ್ತಿ (ಎಂಒಬಿ) ದೇವಿ ನಗರದ ನಿವಾಸಿ ಮಹ್ಮದ್ ಇಮ್ರಾನ್ ಅಲಿಯಾಸ್ ಗಿಟ್‌ಕುಲಗಿ (೨೮) ಕೊಲೆಯಾದಾತ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಆತನ ಸ್ನೇಹಿತರೆ ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೆಯ ಕಳ್ಳನಾಗಿದ್ದ ಮಹ್ಮದ್ ಇಮ್ರಾನ್‌ನನ್ನು ಆತನ ಸ್ನೇಹಿತರಾದ ಅಬ್ದುಲ್,ಅಯಾನ್ ಮತ್ತು ಜುಬೇರ್ ಎಂಬುವರು ಸೇರಿಕೊಂಡು ಬುಧವಾರ ರಾತ್ರಿ ಮಾರಕಾಸ್ತçಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ಡಿಸಿಪಿ ಕನ್ನಿಕಾ ಸಿಕ್ರಿವಾಲ್,ಎಸಿಪಿ ಚಂದ್ರಶೇಖರ,ಇನ್‌ಸ್ಪೆಕ್ಟರ್ ರಾಘವೇಂದ್ರ ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದರು. ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.+