ಬ್ರೇನ್ ಮ್ಯಾಪಿಂಗ್ ಮಾಡಲಿ: ಎಂಎಲ್ಸಿ ಆರ್.ರಾಜೇಂದ್ರ

Rajendra
Published on

ತುಮಕೂರು: ಬ್ರೇನ್ ಮ್ಯಾಪಿಂಗ್ ಮಾಡುತ್ತೇನೆ ಅಂತಾ ಅವರು ಹೇಳಿದ್ದಾರೆ. ಮಾಡಿ ಅಂತಾ ನಾವು ಹೇಳಿದ್ದೇವೆ

ಆದರೆ ಒಳ್ಳೆದು.‌ ಒಳಗಡೆ ಏನಿದೆ ಎಂದು ತಿಳಿಬೇಕಾದರೆ ಬ್ರೇನ್ ಮ್ಯಾಪಿಂಗ್ ಮಾಡಲಿ ಎಂದು ಎಂಎಲ್ಸಿ ಆರ್.ರಾಜೇಂದ್ರ ಟಾಂಗ್ ಕೊಟ್ಟರು.

ಬಾಲಕೃಷ್ಣ ಜತೆಗಿನ‌ ವಾಕ್ಸಮರ ಮುಂದುವರೆಸಿರುವ ರಾಜೇಂದ್ರ, ಯಾರ ಯಾರಿಗೆ ಮಾಡುತ್ತಾರೆ ಮಾಡಲಿ. ಮಾಡಿದರೆ ಒಳ್ಳೆದು ನಮಗೆ ಮೂರೂ ಪಕ್ಷದಲ್ಲಿ ಸ್ನೇಹಿತರು ಇದ್ದಾರೆ. ಹಾಗಂತೆ ಏನೇನೋ ಹೇಳೊಕೆ ಆಗಲ್ಲ ಎಂದು ತಿರುಗೇಟು ಕೊಟ್ಟರು.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬಿಜೆಪಿ ಅವರು ಇದ್ದಾರೆ ಹೌದು. ಬಿಜೆಪಿ ಸರ್ಕಾರ ಇದ್ದಾಗ ರಾಜಣ್ಣನವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದರು.

ಅದನ್ನು ಯಾಕೆ ಯಾರೂ ಹೇಳಲ್ಲ. ಡಿಕೆ ಸುರೇಶ್ ಕೆ ಎಮ್ ಎಫ್ ಅಧ್ಯಕ್ಷರಾಗುತ್ತಾರಾ ಎಂಬ ಪ್ರಶ್ನೆಗೆ, ಚುನಾವಣೆ ಆಗಬೇಕಲ್ಲ. ಆಮೇಲಿಂದ ಹೇಳೋಣ ಎಂದು ರಾಜೇಂದ್ರ ಜಾರಿಕೊಂಡರು.

ಯತ್ನಾಳ ಹೇಳಿಕೆ ನಮಗೆ ಗೊತ್ತಿಲ್ಲ. ಅವರೇ ಅದನ್ನು ಸ್ಪಷ್ಟವಾಗಿ ಹೇಳಬೇಕು. ಸೆಪ್ಟೆಂಬರ್ ಕ್ರಾಂತಿ ಶುರುವಾಗಿದೆ.‌ ಮುಂದೆ ಆಗುತ್ತೆ ಎಂದು ಪುನರುಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net