ರಾಜೇಂದ್ರ ಕೊಲೆ ಪ್ರಕರಣ ತನಿಖೆಗೆ ಮಧುಗಿರಿ ಡಿವೈಎಸ್ಪಿ ನೇತೃತ್ವದ ವಿಶೇಷ ತಂಡ

Rajendra_SP
Published on

ತುಮಕೂರು: ಎಂಎಲ್ಸಿಸಿ ರಾಜೇಂದ್ರ ಕೊಲೆಗೆ ಸುಪಾರಿ ಕೊಟ್ಟಿರುವ ಪ್ರಕರಣದ ತನಿಖೆಗೆ ಮಧುಗಿರಿ ಡಿವೈಎಸ್ಪಿ ಮಂಜುನಾಥ್​ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.

ಕ್ಯಾತಸಂದ್ರ ಠಾಣೆಯಲ್ಲಿ ಎಂಎಲ್ಸಿ ರಾಜೇಂದ್ರ ದೂರಿನ ಹಿನ್ನೆಲೆ ಸೋಮ, ಭರತ್​,ಅಮಿತ್​, ಗುಂಡ, ಯತೀಶ್​ ಹಾಗೂ ಇತರರ ಮೇಲೆ ಎಫ್ ಐಆರ್ ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣವು ಗಂಭೀರವಾದದ್ದು ರಾಜಕೀಯ ಪ್ರೇರಿತವಾದ ಕಾರಣ ತನಿಖೆಗೆ ವಿಶೇಷ ತಂಡವನ್ನು ಎಸ್ಪಿ ಕೆ.ವಿ.ಅಶೋಕ್​ ರಚಿಸಿದ್ದಾರೆ. ಶಿರಾ ಗ್ರಾಮಾಂತರ ಸಿಪಿಐ ರಾಘವೇಂದ್ರ, ಕ್ಯಾತಸಂದ್ರ ಪಿಎಸ್​ಐ ಚೇತನ ಕುಮಾರ್​ ಈ ತಂಡದಲ್ಲಿದ್ದಾರೆ.

ಐವರು ಸೇರಿ ಶಿರಾ ಗೇಟ್​ ಫಾರ್ಮ್ ಹೌಸ್​ ನಲ್ಲಿ ರಾಜೇಂದ್ರ ಹತ್ಯೆಗೆ ಸಂಚು ರೂಪಿಸಿದ್ದು, ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದಲ್ಲದೆ, ಹೊಸ ಕಾರು ಖರೀದಿಸಿದ್ದರು. ಬೆಂಗಳೂರಿನ ಪ್ರಬಲ ವ್ಯಕ್ತಿಯೊಬ್ಬರು 70 ಲಕ್ಷ ರೂ.,ಗೆ ಸುಪಾರಿ ಕೊಟ್ಟಿದ್ದು ಮುಂಗಡವಾಗಿ 5 ಲಕ್ಷ ರೂ.,ಗಳನ್ನು ಸೋಮ, ಭರತ್​ ಖಾತೆ ಜಮೆ ಮಾಡಲಾಗಿದೆ ಎಂಬುದನ್ನು ರಾಜೇಂದ್ರ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಆಧಾರ ವಿವಿಧ ಆಯಾಮಗಳಲ್ಲಿ ವಿಶೇಷ ತಂಡವು ತನಿಖೆ ನಡೆಸಲಿದೆ. ರಾಜೇಂದ್ರ ಸಿಕ್ಕ ಆಡಿಯೋದಲ್ಲಿ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಪೆನ್​ ಡೆವ್​ ಅನ್ನು ಪ್ರಮುಖ ಸಾಕ್ಷ್ಯ ವನ್ನಾಗಿ ಪೊಲೀಸರು ಪರಿಗಣಿಸಿದ್ದಾರೆ.

ಸಿಸಿಟಿವಿ ಫುಟೇಜ್ ತಲಾಷ್​?

ಎಂಎಲ್ಸಿ ರಾಜೇಂದ್ರರ ಕ್ಯಾತಸಂದ್ರ, ಮಧುಗಿರಿ ನಿವಾಸ, ತುಮಕೂರು ನಗರದ ಪ್ರಮುಖ ರಸ್ತೆಗಳ, ಶಿರಾಗೇಟ್​ನ ಸಿಸಿಟಿವಿ ಫುಟೇಜ್​ ಗಳಿಗೆ ವಿಶೇಷ ತಂಡವು ತಲಾಷ್​ ನಡೆಸಲಿದ್ದು ಮೊದಲಿಗೆ ಪಂಚನಾಮೆ ನಡೆಸಲಿರುವ ಪೊಲೀಸರು ತನಿಖೆಯನ್ನು ಶನಿವಾರದಿಂದಲೇ ಆರಂಭಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net