

ತುಮಕೂರು: ಸಹಕಾರ ಸಚಿವ ಕೆ.ಎನ್.ರಾಜಣ್ಣ ಪುತ್ರ ಎಂಎಲ್ ಸಿ ರಾಜೇಂದ್ರ ಕೊಲೆ ಪ್ರಕರಣದ ಎ 1 ಆರೋಪಿ ರೌಡಿಶೀಟರ್ ಸೋಮ ಅಲಿಯಾಸ್ ಜಯಪುರ ಸೋಮ ಪೊಲೀಸರಿಗೆ ಶರಣಾಗಿದ್ದಾನೆ.
ಕ್ಯಾತಸಂದ್ರ ಪೊಲೀಸ್ ಠಾಣೆಗೆ ಬುಧವಾರ ಸಂಜೆ ಬಂದ ಸೋಮ ಶರಣಾಗಿದ್ದಾನೆ. ಆತನ ಜೊತೆಗೆ ಎ-3 ಅರೋಪಿ ಅಮಿತ್ ಕೂಡ ಪೊಲೀಸರಿಗೆ ಸರಂಡರ್ ಆಗಿದ್ದಾರೆ.
ಸೋಮಗೆ ಪೊಲೀಸರಿಂದ ಡ್ರಿಲ್! ಕ್ಯಾತಸಂದ್ರ ಸರ್ಕಲ್ ಇನ್ ಸ್ಪೆಕ್ಟರ್ ಕಚೇರಿಯಲ್ಲಿ ಸೋಮನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಯಿತಿ.
ಕೆಲವೇ ಗಂಟೆಗಳಲ್ಲಿ ಆರೋಪಿ ಸೋಮ ಹಾಗೂ ಅಮಿತ್ ನನ್ನ ವೈದ್ಯಕೀಯ ಪರೀಕ್ಷೆ ಗೆ ಒಳಪಡಿಸಿ, ನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ.
ಪೊಲೀಸರ ಶಾಂತಿಸಭೆಯಲ್ಲಿ ಪುಷ್ಪ !
ಪೊಲೀಸರ ಶಾಂತಿ ಸಭೆಯಲ್ಲು ಪುಷ್ಪ ಅಲಿಯಾಸ್ ಪುಪ್ಷ ಬಾಯಿ ಪ್ರತ್ಯಕ್ಷಳಾಗಿದ್ದಳು. ಕಳೆದ ಶುಕ್ರವಾರ ನಡೆದ ಯುಗಾದಿ ಹಾಗೂ ರಂಜಾನ್ ಹಬ್ಬದ ಶಾಂತಿ ಸಭೆಯಲ್ಲು ಪುಷ್ಪ ಪಾಲ್ಗೊಂಡಿದ್ದಳು. ಎಎಸ್ಪಿ ಮರಿಯಪ್ಪ ನೇತೃತ್ವದಲ್ಲಿ ತುಮಕೂರು ನಗರ ವಿಭಾಗದ ಶಾಂತಿ ಸಭೆ ನಡೆಸಲಾಗಿತ್ತು.