

ಬಾಗಲಕೋಟೆ: ಗ್ರಾಮೀಣ ಪ್ರದೇಶದ ಜನರ ಸಮಸ್ಯೆ, ಬೇಡಿಕೆಗಳಿಗೆ ಸ್ಪಂದಿಸಿ ಇತ್ಯರ್ಥ ಪಡಿಸಲಾಗುವುದು. ಗ್ರಾಮೀಣಾಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ವಿ.ಪ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.
ತಾಲೂಕಿನ ಸುತಗುಂಡಾರ ಹಾಗೂ ಮ್ಯಾಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸೋಮವಾರ ಜನ ಸಂಪರ್ಕ ಸಭೆ ನಡೆಸಿ ಜನರ ಅಹವಾಲು ಸ್ವೀಕರಿಸಿದ ಅವರು, ರಸ್ತೆ ಸುಧಾರಣೆ, ಆಶ್ರಯ ಮನೆಗಳಿಗೆ ಹಕ್ಕುಪತ್ರ, ಸಮರ್ಪಕ ಸಾರಿಗೆ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಕೆಗಳಿಗೆ ಸ್ಪಂಽಸಿ ಶೀಘ್ರದಲ್ಲಿ ಪರಿಹಾರ ಕಲ್ಪಿಸಲಾಗುವುದು ಎಂದರು.
ಕಂದಾಯ ಇಲಾಖೆಗೆ ಸಂಬಂಽತ ಅರ್ಜಿಗಳಿಗೆ ಉತ್ತರಿಸಿದ ತಹಸೀಲ್ದಾರ ವಿನಯಕುಮಾರ ಪಾಟೀಲ, ಮಾಸಾಶನ ಬರುವುದು ನಿಲುಗಡೆಯಾಗಿದ್ದರೆ ಅಂತವರು ಅರ್ಜಿ ಸಲ್ಲಿಸಿದರೆ ತತಕ್ಷಣ ಪರಿಶೀಲನೆ ಮಾಡಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರಲ್ಲದೇ, ಪಹಣಿ ದೋಷಗಳ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸುವಂತೆ ತಿಳಿಸಿದರು.
ಸದಸ್ಯರ ಜೊತೆ ಚರ್ಚೆ: ಇದಕ್ಕೂ ಮೊದಲು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಸುತಗುಂಡಾರ ಮತ್ತು ಮ್ಯಾಗೇರಿ ಗ್ರಾಮ ಪಂಚಾಯತಿ ಸದಸ್ಯರುಗಳ ಜೊತೆ ಸಮಾಲೋಚನೆ ನಡೆಸಿ ಗ್ರಾಮಗಳ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಆದ್ಯತೆಯ ಕೆಲಸಗಳಿಗೆ ಒತ್ತು ನೀಡಬೇಕು. ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಸದಸ್ಯರು ಹೆಚ್ಚು ಆಸಕ್ತಿವಹಿಸಿ ಕೆಲಸ ಮಾಡಬೇಕು ಎಂದರು.
ಮ್ಯಾಗೇರಿವರೆಗೆ ಬರುವ ಬಸ್ಸನ್ನು ಹಂಡರಗಲ್ಲ ಗ್ರಾಮದವರೆಗೆ ಮುಂದುವರೆಸಬೇಕು. ಗ್ರಂಥಾಲಯ ಪ್ರಾರಂಭಿಸಬೇಕು, ಕೆನಾಲಗಳಲ್ಲಿ ಬೆಳೆದಿರುವ ಕಂಟಿ ಸಚ್ಛಗೊಳಿಸಬೇಕು, ಕೂಡಲಸಂಗಮದಿಂದ ನಿಡಗುಂದಿಯವರೆಗೆ ಬಸ್ಸಿನ ವ್ಯವಸ್ಥೆ ಮಾಡಿಕೊಡಬೇಕು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುವ ಗ್ರಾಮ ಸಭೆಗಳಿಗೆ ಎಲ್ಲ ಇಲಾಖೆಯ ಅಽಕಾರಿಗಳು ಹಾಜರಾಗುವ ವ್ಯವಸ್ಥೆಯಾಗಬೇಕು ಎಂದು ಗ್ರಾಮಸ್ಥರು ಬೇಡಿಕೆ ಇಟ್ಟರು.
ಸುತಗುಂಡಾರ ಗ್ರಾಪಂ ಅಧ್ಯಕ್ಷೆ ಮಂಗಳಮ್ಮ ಚಲವಾದಿ, ಮ್ಯಾಗೇರಿ ಗ್ರಾಪಂ ಅಧ್ಯಕ್ಷೆ ಮಹಾದೇವಿ ಮಾದರ, ಬಾಗಲಕೋಟೆ ತಾಲೂಕು ಪಂಚಾಯಿತಿ ಇಒ ಶಿವಾನಂದ ಕಲ್ಲಾಪೂರ, ಜಿಲ್ಲಾ ಪಂಚಾಯತ ಇಂಜನಿಯರಿಂಗ್ ವಿಭಾಗದ ಸಹಾಯಕ ಕರ‍್ಯನಿರ್ವಾಹಕ ಅಭಿಯಂತರ ಈಶ್ವರ ಕುರಬಗಟ್ಟಿ, ಸಾರಿಗೆ ಸಂಸ್ಥೆಯ ಡಿ.ಆರ್.ಮೇಟಿ, ಸಹಾಯಕ ತೋಟಗಾರಿಕೆ ಅಽಕಾರಿ ಸುರೇಶ ಚವ್ಹಾಣ, ಕೃಷಿ ಅಽಕಾರಿ ಆರ್.ಜಿ.ಗೌಡರ, ಮುಖಂಡರಾದ ಶಂಭುಗೌಡ ಪಾಟೀಲ, ಸಂಗನಗೌಡ ಗೌಡರ, ಚಂದ್ರಕಾಂತ ಕೇಸನೂರ, ರಾಮನಗೌಡ ಗೌಡರ, ಹನಮಗೌಡ ಪಾಟೀಲ, ಹನಮಂತ ಕುರಗುಂಡ ಇದ್ದರು.