ರವಿಗೆ ಮಾನಸಿಕೆ ಹಿಂಸೆ ಕೊಟ್ಟಿದ್ದು ಶೋಭೆ ತರುವಂತದ್ದಲ್ಲ

Ravi_somanna
Published on

ತುಮಕೂರು: ಎಂಎಲ್ಸಿ ಸಿ.ಟಿ.ರವಿ ಸದನದಲ್ಲಿ ಯಾವ ರೀತಿ ವರ್ತಿಸುತ್ತಿದ್ದಾರೆ ಎಂಬುವುದನ್ನು ವಿಧಾನಪರಿಷತ್ತಿನ ಸಭಾಪತಿಗಳು ತೀರ್ಮಾನಿಸಲಿದ್ದಾರೆ. ಆದರೆ, ರವಿ ಬಂಧಿಸಿ ಮಾನಸಿಕ ಹಿಂಸೆ ಕೊಟ್ಟಿದ್ದು ಯಾವ ನಾಗರಿಕ ಸರ್ಕಾರಕ್ಕು ಶೋಭೆ ತರುವಂತದ್ದಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತೀಕ್ಷ$$$$್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ವಿಧಾನ ಪರಿಷತ್​ನಲ್ಲಿ ಸಭಾಪತಿಗಳು ಹೇಗೆ ಕಸ್ಟೋಡಿಯನ್ನೋ ಅದೇ ರೀತಿ ಪಾರ್ಲಿಮೆಂಟ್​ನಲ್ಲಿ ಸ್ಪೀಕರ್​ ಇರುತ್ತಾರೆ. ಅವರ ತೀರ್ಮಾನವೇ ಅಂತಿಮ. ರವಿ ಬುದ್ಧಿವಂತ ರಾಜಕಾರಣಿ. ಆ ಮಟ್ಟಕ್ಕಿಳಿದು ಮಾತನಾಡುತ್ತಾರೆ ಅನ್ನುವುದು ನನಗೆ ಗೊತ್ತಿಲ್ಲ. ಅದನ್ನು ತೀರ್ಮಾನ ಮಾಡಬೇಕಾದವರು ಸಭಾಪತಿ ಬವರಾಜ ಹೊರಹಟ್ಟಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net