ಎಂಎಲ್ಸಿ ಸಿ.ಪಿ ಯೋಗೇಶ್ವರ್ ಭಾವ ನಾಪತ್ತೆ

b26c6406-4388-43d2-9087-89482a95bb9a.jpg
Published on

ರಾಮನಗರ: ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರ ಭಾವ ಮಹದೇವಯ್ಯ ಎಂಬುವರು ನಾಪತ್ತೆಯಾಗಿದ್ದು ಆಪರಣದ ಶಂಕೆ ವ್ಯಕ್ತವಾಗಿದೆ.

ಯೋಗೇಶ್ವರವರ ಸಹೋದರಿ ಪುಷ್ಪ ಅವರ ಪತಿಯಾದ ಮಹದೇವಯ್ಯ(60) ಉದ್ಯಮಿಯಾಗಿದ್ದು ಕುಟುಂಬ ಸಮೇತರಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಚಕ್ಕರೆಯಲ್ಲಿರುವ ತಮ್ಮ ತೋಟದ ಮನೆಗೆ ಆಗಮಿಸಿದ್ದ ಮಹದೇವಯ್ಯ ಇದೀಗ ನಾಪತ್ತೆಯಾಗಿದ್ದಾರೆ.

ಶುಕ್ರವಾರ ರಾತ್ರಿ ಇಲ್ಲವೇ ಶನಿವಾರ ಮುಂಜಾನೆ ಮಹದೇವಯ್ಯ ಅವರು ತೋಟದ ಮನೆಯಿಂದ ಕಾಣೆಯಾಗಿದ್ದು ಅಪಹರಣ ನಡೆದಿರುವ ಶಂಕೆ ವ್ಯಕ್ತವಾಗಿದೆ. ತೋಟದ ಮನೆಯಲ್ಲಿನ ಬಾಗಿಲು ಹೊಡೆದಿದ್ದು , ಮನೆಯಲ್ಲಿರುವ ವಸ್ತುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ. 

ಜೊತೆಗೆ  ಅವರ ಕಾರು ಸಹ ಸ್ಥಳದಲ್ಲಿ ಇಲ್ಲ. ಅಲ್ಲದೆ ಅವರ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗಿದ್ದು. ಈ  ಹಿನ್ನೆಲೆಯಲ್ಲಿ ಮಹದೇವಯ್ಯ ಅಪಾರಣವಾಗಿರುವ ಶಂಕೆ ವ್ಯಕ್ತವಾಗಿದೆ . 

ಈ ಸಂಬಂಧ ಚನ್ನಪಟ್ಟಣ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net