

ಲಿಂಗೈಕ್ಯ ಶಿವಾನಂದ ಶಿವಯೋಗಿಗಳ ಸ್ಮರಣೋತ್ಸವ ನಿಮಿತ್ತ ನಾಳೆ ಪಲ್ಲಕ್ಕಿ ಉತ್ಸವ | ಶಾಸಕರಾದ ಅಜಯಸಿಂಗ್ ಅಲ್ಲಮಪ್ರಭು ಮನಗೂಳಿ, ಪಾಟೀಲ್ ಕಂದಕೂರ ಇತರರು ಭಾಗಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ತ್ರಿವಿಧ ದಾಸೋಹ ಕೇಂದ್ರವಾಗಿರುವ ಜೇವರ್ಗಿ ತಾಲೂಕಿನ ಸೊನ್ನ ಗ್ರಾಮದ ಸಿದ್ಧಲಿಂಗೇಶ್ವರ ದಾಸೋಹ ವಿರಕ್ತಮಠದ ಲಿಂಗೈಕ್ಯ ಶಿವಾನಂದ ಶಿವಯೋಗಿಗಳ ೪೪ನೇ ಪುಣ್ಮ ಸ್ಮರಣೋತ್ಸವ ಅಂಗವಾಗಿ ಸೆ.೨೦ ರಂದು ಸಂಜೆ ೬ ಗಂಟೆಗೆ ಶಿವಾನುಭವದಲ್ಲಿ ಸನ್ಮಾನ ಹಾಗೂ ಪ್ರವಚನ ಮಂಗಲ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠದ ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳು ತಿಳಿಸಿದರು.
ಸೆ.೯ರಿಂದ ೨೧ವರೆಗೆ ಶಿವಯೋಗಿಗಳ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಪೂಜೆ ನಡೆದುಕೊಂಡು ಬರುತ್ತಿದೆ. ಅಲ್ಲದೆ ಶರಣರ ದರ್ಶನ ಕುರಿತು ಶಿವಲಿಂಗಯ್ಯ ಶಾಸ್ತಿçÃಗಳು ನಡೆಸಿಕೊಂಡು ಬರುತ್ತಿರುವ ಪ್ರವಚನ ಮಂಗಲ ಹಾಗೂ ಗೌರವ ಸನ್ಮಾನ ಸಮಾರಂಭವು ಶ್ರೀಶೈಲಸಾರಂಗಮಠ-ಸುಲಫಲ ಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ, ಇಜೇರಿ-ಮಸಬಿನಾಳ ವಿರಕ್ತಮಠದ ಪೂಜ್ಯ ಸಿದ್ದರಾಮ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಜರುಗಲಿದೆ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೆಲೋಗಿಯ ಪೂಜ್ಯ ಸಿದ್ದಲಿಂಗ ಮಹಾಸ್ವಾಮೀಜಿ, ಜೇರಟಗಿಯ ಮಹಾಂತ ಸ್ವಾಮೀಜಿ, ಫಿರೋಜಾಬಾದಿನ ಗುರುಬಸವ ಮಹಾಸ್ವಾಮೀಜಿ ಹಾಗೂ ಯಡ್ರಾಮಿಯ ಸಿದ್ಧಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ಕೆಕೆಆರ್‌ಡಿಬಿ ನೂತನ ಅಧ್ಯಕ್ಷ ಡಾ.ಅಜಯಸಿಂಗ್ ಧರ್ಮಸಿಂಗ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಅಶೋಕ ಮನಗೂಳಿ ಸಿಂದಗಿ, ರಾಜುಗೌಡ ಪಾಟೀಲ್ ದೇವರಹಿಪ್ಪರಗಿ, ಶರಣಗೌಡ ಕಂದಕೂರ ಗುರುಮಠಕಲ್, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ವಿಶೇಷ ಗೌರವ ಸ್ಕತ್ಕಾರ ಮಾಡಲಾಗುವುದು. ಅಲ್ಲದೆ ರಸಾಯನಿಕ ಬಳಸದೆ ಕೀಟ ನಿರ್ವಹಣೆ ಪದ್ಧತಿ ಆವಿಷ್ಕಾರ ಮಾಡಿರುವ ಹರವಾಳದ ವಿದ್ಯಾರ್ಥಿನಿ ಮಲ್ಲಿಕಾಗೆ ಸನ್ಮಾನಿಸಲಾಗುವುದು ಎಂದು ಹೇಳಿದರು.
ಯುವ ಮುಖಂಡ ವಿಜಯಕುಮಾರ ಕೇದಾರಲಿಂಗಯ್ಯ ಹಿರೇಮಠ ಅವರಿಗೆ ಶ್ರೀಮಠದಿಂದ ಯುವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದೆÃವಾಡಗಿ ಆಗಮಿಸುವರು. ಬಸವರಾಜ ಮಾಸ್ತರ ಶಹಾಪುರ ಸ್ಮರಣಾರ್ಥ ಅವರ ಪುತ್ರ ರೋಮೇಶ ಮುಧೋಳ ಅವರಿಂದ ನಿರ್ಗತಿಕ ಮಕ್ಕಳಿಗೆ ಸಮವಸ್ತç ವಿತರಿಸಲಾಗುವುದು ಎಂದು ಪೂಜ್ಯ ಶಿವಾನಂದ ಸ್ವಾಮೀಜಿ ತಿಳಿಸಿದರು.
ಸ್ವಾತಂತ್ರÈ ಯೋಧರು ಆಗಿದ್ದ ಸೊನ್ನದ ಮಠದ ಹಿಂದಿನ ಪೂಜ್ಯರಾದ ಲಿಂಗೈಕ್ಯ ಶತಾಯುಷಿ ಶಿವಾನಂದ ಶಿವಯೋಗಿಗಳ ಸ್ಮರಣೋತ್ಸವ ಅಂಗವಾಗಿ ೨೧ರಂದು ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶಿವಾನಂದ ಸಾಹು ಮಾಕಾ, ಬಸವರಾಜ ಬಿರಾದಾರ, ಶಿವಾನಂದ ಮುಧೋಳ, ವಿಜಯಕುಮಾರ ಬಿರಾದಾರ, ಸಕ್ರೆಪ್ಪಗೌಡ ಮೊದಲಾದವರಿದ್ದರು.
ಶತಾಯುಷಿ ಶ್ರೇಷ್ಠ ಕಾಯಕ ಜೀವಿ ಹಿರಿಯ ಸ್ವಾಮೀಜಿ
ಲಿಂಗೈಕ್ಯ ಶಿವಾನಂದ ಶಿವಯೋಗಿಗಳು ಮಾಡಿರುವ ಕಾರ್ಯಗಳು ಮಾದರಿಯಾಗಿವೆ. ಕರ್ನಾಟಕ ಗಾಂಧಿ ಎಂದು ಕರೆಸಿಕೊಂಡ ಹರ್ಡೇಕರ್ ಮಂಜಪ್ಪ, ಕೆಂಗನಾಳ ಸಂಗನಬಸವರ ನಿಟಕವರ್ತಿಗಳಾಗಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ೧೧೪ ವರ್ಷ ಜೀವಿಸಿದ್ದರು. ಅಂತಹ ಶ್ರೇಷ್ಠರು ಹಾಕಿಕೊಟ್ಟ ಮಾರ್ಗದಲ್ಲಿ ಮಠ ಸಾಗಿದೆ. ನಿರ್ಗತಿಕ ಮಕ್ಕಳ ಕುಟೀರವನ್ನು ಆರಂಭಿಸಿದ್ದು ೨೫ ಮಕ್ಕಳಿದ್ದಾರೆ. ಶಾಲಾ-ಕಾಲೇಜಿನಲ್ಲಿ ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ.
| ಪೂಜ್ಯ ಡಾ.ಶಿವಾನಂದ ಮಹಾಸ್ವಾಮಿಗಳು ಸೊನ್ನ ಮಠ
===