ರಾಮನಗರ: ಜೆಡಿಎಸ್ ಕಾರ್ಯಕರ್ತ ಕೊತ್ತಿಪುರ ಗೋವಿಂದರಾಜು ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಆಪ್ತ ಅನಿಲ್ ಜೋಗಿಂದರ್ ನ್ಯಾಯಾಲಯಕ್ಕೆ ಶರಣಾಗಿದ್ದು, ಪೊಲೀಸರು ವಿಚಾರಣೆಗಾಗಿ ಎರಡು ದಿನ ವಶಕ್ಕೆ ಪಡೆದುಕೊಂಡಿದ್ದಾರೆ.
ರಾಮನಗರದ ದಲಿತ ಮುಖಂಡರೂ ಆಗಿರುವ ಗೋವಿಂದರಾಜು ಮೇಲೆ ಒಂದೂವರೆ ತಿಂಗಳ ಹಿಂದೆ ಹಲ್ಲೆ ನಡೆದಿತ್ತು. ಈ ಸಂಬಂಧ ದಾಖಲಾಗಿದ್ದ ದೂರಿನ ಹಿನ್ನೆಲೆಯಲ್ಲಿ ಅನಿಲ್ ಜೋಗಿಂದರ್ ಸೇರಿ ಒಟ್ಟು 9 ಮಂದಿ ವಿರುದ್ಧ ಹಲ್ಲೆ ಮತ್ತು ಎಸ್‌ಸಿ- ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಐಜೂರು ಪೊಲೀಸರು ದರ್ಶನ್ ಮತ್ತು ಹರ್ಷ ಎಂಬುವರನ್ನು ಬಂಧಿಸಿದ್ದರು. ಆದರೆ, ಪ್ರಕರಣ ಮೊದಲ ಆರೋಪಿ ಅನಿಲ್ ಅವರನ್ನು ಬಂಧಿಸಿರಲಿಲ್ಲ. ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಅನಿಲ್ ಮೂರ‌್ನಾಲ್ಕು ದಿನಗಳ ಹಿಂದೆ ನ್ಯಾಯಾಲಯದಲ್ಲಿ ಶರಣಾಗಿದ್ದು, ಇದು ಕುತೂಹಲ ಮತ್ತು ಅನುಮಾನಕ್ಕೆ ಕಾರಣವಾಗಿದೆ. ಆರೋಪಿಗಳ ಪೈಕಿ, ರವಿ ಮತ್ತು ಚೇತನ್ ಕುವಾರ್ ಅವರಿಗೆ ವಾತ್ರ ದೌರ್ಜನ್ಯ ಕಾಯ್ದೆ ಅನ್ವಯಿಸಲಿದೆ. ಆ ಕುರಿತು ಇಬ್ಬರನ್ನೂ ಕರೆದು ಪ್ರಾಥಮಿಕ ವಿಚಾರಣೆ ನಡೆಸಿದಾಗ, ಅವರ ಪಾತ್ರವಿಲ್ಲರುವುದು ಗೊತ್ತಾಯಿತು. ಟನಾ ಸ್ಥಳದಲ್ಲಿ ಅನಿಲ್ ಇಲ್ಲದಿದ್ದರಿಂದ ಬಂಧಿಸಿರಲಿಲ್ಲ. ಆದರೆ, ಪ್ರಕರಣದ ಮೊದಲ ಆರೋಪಿಯಾಗಿರುವ ಆತ ಕೋರ್ಟ್‌ಗೆ ಶರಣಾಗಿದ್ದಾನೆ. ಹಾಗಾಗಿ, ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದೇವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.