

ಬೆಂಗಳೂರು :ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ವಿಜಯವಾಣಿ ಮುದ್ರಣಾಲಯಕ್ಕೆ ಭೇಟಿ ನೀಡಿದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ಪತ್ನಿ ಡಾ.ವಾಣಿಶ್ರೀ ವಿಶ್ವನಾಥ, ಪತ್ರಿಕೆ ಮುದ್ರಣಗೊಳ್ಳುವ ತಂತ್ರಜ್ಞಾನವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವಿಧ್ಯಾರ್ಥಿಗಳು ಮತ್ತು ಸಂಘ ಸಂಸ್ಥೆಗಳ ಸದಸ್ಯರಿಗೆ ವಿಜಯವಾಣಿ ಮುದ್ರಣಾಲಯಕ್ಕೆ ಭೇಟಿ ನೀಡಲು ಇರುವ ಅವಕಾಶದ 50 ಸುವರ್ಣ ತಂಡವಾಗಿ ವಿಶ್ವವಾಣಿ ಫೌಂಡೇಶನ್ ಸದಸ್ಯರೊಂದಿಗೆ ಆಗಮಿಸಿದ ವಿಶ್ವನಾಥ್ ಪತ್ರಿಕೆ ಮುದ್ರಣಗೊಳ್ಳುವ ವಿಧಾನ ಮತ್ತು ತಂತ್ರಜ್ಞಾನದ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಈ ವೇಳೆ ಮಾತನಾಡಿದ ವಿಶ್ವನಾಥ, ಸಾಮಾಜಿಕ ಜಾಲತಾಣಗಳ ಅಬ್ಬರ, ಆರ್ಭಟದ ನಡುವೆ ಪತ್ರಿಕಾ ಸಂಸ್ಕೃತಿಯ ಮೂಲಕ ಓದುಗ ಜಗತ್ತನ್ನು ಜೀವಂತವಾಗಿಡುವ ಹೊಣೆಯನ್ನು ವಿಜಯವಾಣಿ ದಿನಪತ್ರಿಕೆ ವೈಶಿಷ್ಟ್ಯಪೂರ್ಣವಾಗಿ ನಿರ್ವಹಿಸುತ್ತಿದೆ. ಡಾ.ವಿಜಯ ಸಂಕೇಶ್ವರ ಮತ್ತು ಡಾ. ಆನಂದ ಸಂಕೇಶ್ವರ ಅವರ ಸೇವಾಬದ್ಧತೆ ಈ ಯಶಸ್ಸಿಗೆ ಕಾರಣ ಎಂದು ಪ್ರಶಂಸಿಸಿದರು.
ಸಂಪಾದಕೀಯ ವಿಭಾಗದಿಂದ ಬರುವ ಪೇಜ್‌ಗಳನ್ನು ಪ್ಲೇಟ್‌ಗಳನ್ನಾಗಿ ಪರಿವರ್ತಿಸುವುದರಿಂದ ಆರಂಭಿಸಿ ಮುದ್ರಣಗೊಳ್ಳುವ ರೀತಿ, ಫೋಲ್ಡಿಂಗ್ ಆಗಿ ಪತ್ರಿಕೆ ಹೊರಬಂದು, ಬಂಡಲ್ ಮಾಡಿ, ವಿತರಣಾ ಪ್ರಕ್ರಿಯೆಗೆ ಅಣಿಗೊಳ್ಳುವ ಎಲ್ಲ ಹಂತದ ಬಗ್ಗೆ ಸಿಬ್ಬಂದಿಗಳು ಅತಿಥಿಗಳಿಗೆ ವಿವರಿಸಿದರು. ಸಿಂಗನಾಯಕನಹಳ್ಳಿಯ ರೈತರ ಸೇವಾ ಸಹಕಾರ ಸಂಘ ನಿ.ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್, ವಿಶ್ವವಾಣಿ ಫೌಂಡೇಶನ್ ಸದಸ್ಯರು, ಯಲಹಂಕ ನಗರ ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.
-ಎಸ್.ಆರ್.ವಿಶ್ವನಾಥ್, ಯಲಹಂಕ ಶಾಸಕರು
-ಡಾ.ವಾಣಿಶ್ರೀ ವಿಶ್ವನಾಥ್, ರೈತರ ಸೇವಾ ಸಹಕಾರ ಸಂಘ ನಿ.ಅಧ್ಯಕ್ಷರು, ಸಿಂಗನಾಯಕನಹಳ್ಳಿ.
-ಬೃಂದಾ ವೀರೇಶ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರು, ಯಲಹಂಕ
-ಕವಿತಾ ಶ್ರೀನಿಧಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರು, ಅಟ್ಟೂರು