ಆರ್​ಎಸ್​ಎಸ್​ ವಿರುದ್ಧ ಮಾತಾಡಿದ್ದ ಮಾಜಿ ಶಾಸಕ ಸುರೇಶ್​ ಗೌಡ ರಾಜೀನಾಮೆ; ತುಮಕೂರು ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ!

Suresh
Published on

ತುಮಕೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್​ ಗೌಡ ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸುರೇಶ್ ರಾಜೀನಾಮೆಯಿಂದ ತುಮಕೂರು ಜಿಲ್ಲಾ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಇವರ ದಿಢೀರ್ ರಾಜೀನಾಮೆ ಸಾಕಷ್ಟು ಕುತೂಹಲದ ಜೊತೆಗೆ ಒಂದಷ್ಟು ಪ್ರಶ್ನೆಗಳನ್ನೂ ಹುಟ್ಟುಹಾಕಿದೆ.

ರಾಜೀನಾಮೆ ನೀಡಿದ ಕುರಿತು ಸುರೇಶ್ ಗೌಡ ಇನ್ನೂ ಯಾವುದೇ ಕಾರಣವನ್ನು ಸ್ಪಷ್ಟವಾಗಿ ಕೊಟ್ಟಿಲ್ಲ. ಒಂದೂವರೆ ವರ್ಷದ ಹಿಂದೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಸುರೇಶಗೌಡ, ತಮ್ಮ ಅವಧಿ ಇನ್ನೂ ಒಂದು ವರ್ಷ ಇರುವಾಗಲೇ ರಾಜೀನಾಮೆ ನೀಡಿದ್ದಾರೆ.

ಸುರೇಶ್​ ಗೌಡ ಅವರು ಕೆಲವು ವರ್ಷಗಳ ಹಿಂದೆ ಆರ್​ಎಸ್​ಎಸ್​ ವಿರುದ್ಧ ಅಪಮಾನಕಾರ ಆಗುವಂಥ ಮಾತುಗಳನ್ನು ಆಡಿದ್ದರು. ಈ ಹಿಂದೆಯೇ ಕೆಲವು ಸಲ ವೈರಲ್ ಆಗಿದ್ದ ಆ ಮಾತುಗಳ ವಿಡಿಯೋ ಇತ್ತೀಚೆಗೆ ಮತ್ತೊಮ್ಮೆ ವೈರಲ್ ಆಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net