ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮ

Untitled design (3)
ಮಸ್ಕಿ ತಾಲ್ಲೂಕಿನ ಬಳಗಾನೂರು ಹೊಬಳಿಯ ಬೆಳ್ಳಿಗನೂರು ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಚಾಲನೆ ನೀಡಿದರು. ಗೌಡನಬಾವಿ ಗ್ರಾ.ಪಂ.ಅಧ್ಯಕ್ಷ ರವಿಕುಮಾರ, ಕಾಂಗ್ರೆಸ್ ಪ್ರಮುಖರಾದ ವಂದಾಲೆಪ್ಪ, ರಮೇಶ, ಮರಿಯಪ್ಪ ಇದ್ದರು.
Published on

ಮಸ್ಕಿ: ಜಲ ಜೀವನ್ ಮಿಷನ್ ಯೋಜನೆಯಿಂದ ನಲ್ಲಿಗಳ ಮೂಲಕ ಜನರ ಮನೆಗಳಿಗೆ ಶುದ್ಧ್ದವಾದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗವುದು ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಜನರಿಗೆ ತೊಂದರೆಯಾಗದಂತೆ ಕ್ರಮ

ತಾಲ್ಲೂಕಿನ ಬಳಗಾನೂರು ಹೋಬಳಿಯ ಬೆಳ್ಳಿಗನೂರು ಗ್ರಾಮದಲ್ಲಿ ಮಂಗಳವಾರ ಜಲ ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರ ಸರ್ಕಾರದಿಂದ ಶೇ.45 ಮತ್ತು ರಾಜ್ಯ ಸರ್ಕಾರದಿಂದ ಶೇ.45 ಮತ್ತು ಸಾರ್ವಜನಿಕರಿಂದ ಶೇ.10 ರಷ್ಟು ಹಣವನ್ನು ಬಳಸುವಂತೆ ಯೋಜನೆಯನ್ನು ರೂಪಿಸಲಾಗಿತ್ತು. ನಂತರ ಸಾರ್ವಜನಿಕರ ಹಣವನ್ನು ರಾಜ್ಯದ ಸಿದ್ದರಾಮಯ್ಯ ಸರ್ಕಾರ ಶೇ.10 ರಷ್ಟು ಹಣವನ್ನು ನೀಡುವ ಮೂಲಕ ಜನರಿಗೆ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ ಎಂದು ತಿಳಿಸಿದರು.

ಗೌಡನಬಾವಿ ಗ್ರಾಪಂ ಅಧ್ಯಕ್ಷ ರವಿಕುಮಾರ, ಕಾಂಗ್ರೆಸ್ ಪ್ರಮುಖರಾದ ವಂದಾಲೆಪ್ಪ, ರಮೇಶ, ಮರಿಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net