More

    ಬೈರುತ್​ ಭಯಾನಕ ಸ್ಫೋಟಕ್ಕೆ ಕುಸಿದದ್ದು ಬರೀ ಕಟ್ಟಡಗಳಲ್ಲ…, ಇಡೀ ದೇಶದ ಆಹಾರ ಭದ್ರತೆ…!

    ಬೈರುತ್​: ಲೆಬನಾನ್​ನಲ್ಲಿ ಸಂಭವಿಸಿದ ಸ್ಫೋಟಕ್ಕೆ ಇಡೀ ರಾಜಧಾನಿಯೇ ನಡುಗಿದೆ. ಇದರ ಭೀಕರತೆ ಎಷ್ಟು ತೀವ್ರವಾಗಿತ್ತು ಎಂದರೆ, 240 ಕಿ.ಮೀ. ದೂರದ ದ್ವೀಪದಲ್ಲೂ ಸ್ಫೋಟದ ಸದ್ದು ಕೇಳಿಸಿದೆ…!

    ಇಡೀ ಬೈರತ್​ ಪಟ್ಟಣ ಸ್ಫೋಟದಿಂದಾಗಿ ನಲುಗಿ ಹೋಗಿದೆ. ಬಂದರಿನ ಬಳಿಯಿದ್ದ ಕಟ್ಟಡಗಳೆಲ್ಲ ಧ್ವಂಸವಾಗಿವೆ. ಗಾಜಿನ ಚೂರುಗಳ ಬಿರುಗಾಳಿಯೇ ಬೀಸಿದಂತಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಸ್ಫೋಟಕ್ಕೆ ಸದ್ಯ 100ಕ್ಕೂ ಅಧಿಕ ಜನರು ಬಲಿಯಾಗಿದ್ದರೆ, 4,000ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿಯಿಂದ ಶವಗಳನ್ನು ಹೊರತೆಗೆಯುತ್ತಲೇ ಇದ್ದಾರೆ.

    ಇದನ್ನೂ ಓದಿ; ಸಾವಿನಲ್ಲೂ ಗುಟ್ಟು ಬಿಟ್ಟು ಕೊಡದ ಶ್ರೀಲಂಕಾ ಗ್ಯಾಂಗ್​ಸ್ಟರ್; ಎರಡು ವರ್ಷಗಳಿಂದ ಭಾರತದಲ್ಲೇ ಅಡಗಿದ್ದ…! 

    ಸ್ಫೋಟ ಸಂಭವಿಸಿದ ಸ್ಥಳದಲ್ಲಿದ್ದ ಗೋಪುರಾಕಾರದ ಕಟ್ಟಡಗಳು ನೆಲಸಮವಾಗಿವೆ. ಇವು ಕೇವಲ ಕಟ್ಟಡಗಳಾಗಿರಲಿಲ್ಲ, ಬದಲಿಗೆ ಗೋಧಿ ಸೇರಿ ವಿವಿಧ ಧಾನ್ಯಗಳ ದಾಸ್ತಾನು ಗೋದಾಮುಗಳಾಗಿದ್ದವು. 1.20 ಲಕ್ಷ ಟನ್​ ದಾಸ್ತಾಮು ಸಾಮರ್ಥ್ಯ ಹೊಂದಿದ್ದವು. ಆದರೆ, ಸ್ಫೋಟದ ಸಮಯದಲ್ಲಿ ಅಲ್ಲಿ ಹೆಚ್ಚು ದಾಸ್ತಾನಿರಲಿಲ್ಲ ಎಂದು ಹೇಳಲಾಗಿದೆ.

    ಸಾಮಾನ್ಯವಾಗಿ 3 ತಿಂಗಳಿಗೆ ಬೇಕಾಗುವಷ್ಟು ಆಹಾರ ಧಾನ್ಯ ಶೇಖರಿಸಿಡಲಾಗುತ್ತಿತ್ತು. ಆದರೆ, ಸದ್ಯ ಲೆಬನಾನ್​ನಲ್ಲಿ ಒಂದು ತಿಂಗಳಿಗಿಂತಲೂ ಕಡಿಮೆ ಅವಧಿಗಾಗುವಷ್ಟು ಗೋಧಿ ಹಾಗೂ ಇತರ ಧಾನ್ಯವಿದೆ ಎಂದು ಹಣಕಾಸು ಸಚಿವ ರೆವೋಲ್​ ನೆಹ್ಮೆ ಹೇಳಿದ್ದಾರೆ.

    ಇದನ್ನೂ ಓದಿ; ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ಗೆ ಮುಳುವಾಗುತ್ತಾ ‘ನಯಾ ಪಾಕಿಸ್ತಾನ್​’ ನಕ್ಷೆ? 

    ಇದಲ್ಲದೇ, ಬೈರುತ್​ ಬಂದರು ಇನ್ನಾರು ತಿಂಗಳು ಯಾವುದೇ ಹಡಗಿನಿಂದ ಆಮದನ್ನು ಸ್ವೀಕರಿಸುವ ಸ್ಥಿತಿಯಲ್ಲಿಲ್ಲ. ತ್ರಿಪೋಳಿ ಬಂದರಿನಲ್ಲಿ ಹಡಗು ನಿಲ್ಲಬಹುದಾದರೂ ಅಲ್ಲಿ ಆಹಾರ ಧಾನ್ಯ ಸಂಗ್ರಹಕ್ಕೆ ಗೋದಾಮುಗಳಿಲ್ಲ ಎಂದು ಹೇಳಲಾಗಿದೆ. ಹೀಗಾಗಿ 25 ಸಾವಿರ ಗೋದಿ ಹಿಟ್ಟನ್ನು ತುರ್ತಾಗಿ ಇಲ್ಲಿಂದ ಎರಡು ಕಿ.ಮೀ. ದೂರದಲ್ಲಿರುವ ಗೋದಾಮುಗಳಿಗೆ ಸಾಗಿಸಲಾಗುತ್ತದೆ. ಇದಲ್ಲದೇ, 28 ಸಾವಿರ ಟನ್​ ಗೋದಿ ಹೊತ್ತ ನಾಲ್ಕು ಹಡಗುಗಳು ಇನ್ನಷ್ಟೇ ಬಂದರಿಗೆ ತಲುಪಬೇಕಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

    ಈ ಗ್ರಾಮದ ಪ್ರತಿ ಮಗುವಿನ ಕನಸು ಐಎಎಸ್​ ಅಧಿಕಾರಿಯಾಗುವುದು…! 50ಕ್ಕೂ ಹೆಚ್ಚು ಜನರು ಯಶಸ್ವಿ; ಒಂದೇ ಕುಟುಂಬದ 13 ಜನ ಪಾಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts