More

    ಈ ಷೇರು ಖರೀದಿಸಲು NSEಯಲ್ಲಿ ಸರತಿಸಾಲು: ಮಾರುವವರೇ ಇಲ್ಲ; ತಿಂಗಳಲ್ಲಿ ಸ್ಟಾಕ್​ ಬೆಲೆ ದುಪಟ್ಟು

    ಮುಂಬೈ: ಈ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಹಣದ ಸುರಿಮಳೆಯೇ ಆಗಿದೆ. ಕೇವಲ ಈ ಷೇರುಗಲ್ಲಿ ತೊಡಗಿಸಿದ ಹಣವು 10 ತಿಂಗಳಲ್ಲಿ 7 ಪಟ್ಟು ಹೆಚ್ಚು ಆಗಿದೆ. ಅಲ್ಲದೆ, ಒಂದೇ ತಿಂಗಳಲ್ಲಿ ಷೇರು ಬೆಲೆ ದುಪ್ಪಟ್ಟು ಆಗಿದೆ.

    ಇದೇ ಐಎಫ್​ಸಿಐ ಲಿಮಿಟೆಡ್​ (IFCI Ltd.- Industrial Finance Corporation of India) ಷೇರು. 10 ತಿಂಗಳ ಹಿಂದೆ ಯಾರಾದರೂ ಈ ಷೇರುಗಳಲ್ಲಿ 1 ಲಕ್ಷ ರೂ. ಹಣ ತೊಡಗಿಸಿದ್ದರೆ ಅದು ಈಗ 6,78,333 ರೂಪಾಯಿ ಆಗುತ್ತಿತ್ತು. ಅಂದರೆ ಈ ಅವಧಿಯಲ್ಲಿ ಬಹುತೇಕ ಏಳು ಪಟ್ಟು ಹೆಚ್ಚಳವಾಗುತ್ತಿತ್ತು. 10 ತಿಂಗಳ ಹಿಂದೆ 2023ರ ಮಾರ್ಚ್ 28 ರಂದು ಈ ಷೇರಿನ ಬೆಲೆ ಕೇವಲ 9 ರೂಪಾಯಿ ಇತ್ತು. ಈಗ ಈ ಷೇರು ಬೆಲೆ 61 ರೂಪಾಯಿ ದಾಟಿದೆ.

    ಕಳೆದ ಐದು ದಿನಗಳಲ್ಲಿ, ಈ ಷೇರು ಅಂದಾಜು 40% ರಷ್ಟು ಏರಿಕೆಯನ್ನು ಕಂಡಿದೆ. ಈ ಪೈಕಿ ಮೂರು ಬಾರಿ ಶೇ.10ರಷ್ಟು ಅಪ್ಪರ್ ಸರ್ಕ್ಯೂಟ್ (ಅಂದರೆ, ಒಂದು ದಿನದಲ್ಲಿ ಷೇರು ಗರಿಷ್ಠ ಹೆಚ್ಚಳ ಕಂಡರೆ, ಅದರ ವಹಿವಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ) ಅಳವಡಿಸಲಾಗಿದೆ.

    ಬುಧವಾರ (ಜನವರಿ 31) ಕೂಡ ಈ ಸ್ಟಾಕ್ 59.95 ರೂ.ಗೆ ತೆರೆದು 56.50 ರೂ.ಗೆ ಇಳಿದ ನಂತರ ಅಪ್ಪರ್ ಸರ್ಕ್ಯೂಟ್‌ನೊಂದಿಗೆ 61.05 ರೂ.ಗೆ ತಲುಪಿದೆ. ಇದರ 52 ವಾರದ ಗರಿಷ್ಠ ಬೆಲೆ 63.85 ರೂ ಮತ್ತು ಕನಿಷ್ಠ ಬೆಲೆ 9 ರೂಪಾಯಿ ಇದೆ.

    ಕೇವಲ ಒಂದೇ ವರ್ಷದಲ್ಲಿ ತನ್ನ ಹೂಡಿಕೆದಾರರ ಹಣವನ್ನು ಐದು ಪಟ್ಟು ಹೆಚ್ಚಿಸಿದೆ. ಒಂದು ವರ್ಷದ ಹಿಂದೆ ಐಎಫ್‌ಸಿಐ ಷೇರುಗಳಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದವರ ಹಣ ಈಗ 4.84 ಲಕ್ಷ ರೂ.ಗೆ ಏರಿಕೆಯಾಗಿದೆ.

    ಈಗಲೂ ಇದು ಶಾಕರ್‌ ಸ್ಟಾಕ್ ಆಗಿಯೇ ಮುಂದುವರಿದಿದೆ. ಕಳೆದ ಮೂರು ದಿನಗಳಲ್ಲಿ ಶೇಕಡ 15ಕ್ಕಿಂತ ಹೆಚ್ಚಿನ ಆದಾಯವನ್ನು ನೀಡಿದೆ. ಕಳೆದ ಏಳು ದಿನಗಳಲ್ಲಿ 52% ಮತ್ತು ಕಳೆದ 15 ದಿನಗಳಲ್ಲಿ 104% ಹೆಚ್ಚಾಗಿದೆ. ಕಳೆದ 3 ತಿಂಗಳಲ್ಲಿ ಈ ಷೇರುಗಳು 181% ನಷ್ಟು ಲಾಭವನ್ನು ನೀಡಿವೆ.

    ಬುಧವಾರ ಎನ್​ಎಸ್​ಇ ಆದೇಶ ಪುಸ್ತಕದಲ್ಲಿ (NSE order book) 86,31,171 ಷೇರುಗಳನ್ನು ಖರೀದಿಸಲು
    ಹೂಡಿಕೆದಾರರು ಸಾಲಿನಲ್ಲಿದ್ದಾರೆ. ಆದರೆ, ಯಾರೂ ಮಾರಾಟ ಮಾಡಲು ಸಿದ್ಧರಿಲ್ಲ.

    ಈ ಷೇರು ಕುರಿತು ವಿದೇಶಿ ಹೂಡಿಕೆದಾರರು ಕೂಡ ಪ್ರಭಾವಿತರಾಗಿದ್ದಾರೆ: ಡಿಸೆಂಬರ್ ತ್ರೈಮಾಸಿಕದಲ್ಲಿ ಸಾಂಸ್ಥಿಕ ವಿದೇಶಿ ಹೂಡಿಕೆದಾರರು ಈ ಷೇರಿನಲ್ಲಿ ತಮ್ಮ ಪಾಲನ್ನು 1.87 ರಿಂದ 2.08 ರಷ್ಟು ಹೆಚ್ಚಿಸಿಕೊಂಡಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ತಮ್ಮ ಷೇರುಗಳನ್ನು 1.97 ರಿಂದ 1.98 ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಇತರರು ಶೇಕಡಾ 25.62 ಪಾಲನ್ನು ಹೊಂದಿದ್ದರೆ, ಪ್ರವರ್ತಕರು ಶೇಕಡಾ 70.32 ಪಾಲನ್ನು ಹೊಂದಿದ್ದಾರೆ.‘

    ಐಎಫ್​ಸಿಐ ಸಾಲಗಳ ಮೂಲಕ ವಿವಿಧ ಕೈಗಾರಿಕೆಗಳಿಗೆ ಆರ್ಥಿಕ ಸಹಾಯವನ್ನು ಒದಗಿಸುತ್ತದೆ. ಕಂಪನಿಯು ವಿಮಾನ ನಿಲ್ದಾಣಗಳು, ರಸ್ತೆಗಳು, ಟೆಲಿಕಾಂ, ವಿದ್ಯುತ್, ರಿಯಲ್ ಎಸ್ಟೇಟ್, ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಿಗೆ ಸಂಬಂಧಿಸಿದ ಕಂಪನಿಗಳಿಗೆ ಸಾಲವನ್ನು ಒದಗಿಸಿದೆ. ಕಂಪನಿಯ ವೆಬ್‌ಸೈಟ್ ಪ್ರಕಾರ, ಐಎಫ್‌ಎಸ್‌ಸಿ ಅದಾನಿ ಗ್ರೂಪ್‌ನ ಅದಾನಿ ಮುಂದ್ರಾ ಪೋರ್ಟ್, ಜಿಎಂಆರ್‌ನ ಗೋವಾ ಇಂಟರ್‌ನ್ಯಾಶನಲ್ ಏರ್‌ಪೋರ್ಟ್, ಸಲಾಸರ್ ಹೈವೇಯಂತಹ ದೊಡ್ಡ ಯೋಜನೆಗಳಿಗೆ ಹಣವನ್ನು ನೀಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts