More

    ಇದು ಸಾಧ್ಯವೇ?: 200 ಅಂಕಗಳ ಪ್ರಶ್ನೆಪತ್ರಿಕೆಗೆ ವಿದ್ಯಾರ್ಥಿನಿಗೆ ದೊರೆತಿದ್ದು 212 ಅಂಕಗಳು!

    ನವದೆಹಲಿ: ಗುಜರಾತ್‌ನ ದಾಹೋದ್ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಪರೀಕ್ಷೆಯ ಫಲಿತಾಂಶಗಳಲ್ಲಿನ ಗಮನಾರ್ಹ ದೋಷವು ವಿವಾದವನ್ನು ಹುಟ್ಟುಹಾಕಿದೆ. ಶಿಕ್ಷಣ ವ್ಯವಸ್ಥೆಯ ಸಮಗ್ರತೆಯ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ. ಈ ಘಟನೆಯು ಜಲೋದ್ ತಾಲೂಕಿನ ಖರಸಾನಾ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ನಾಲ್ಕನೇ ತರಗತಿ ವಿದ್ಯಾರ್ಥಿ ವಂಶಿಬೆನ್ ಮನೀಶ್‌ಭಾಯ್ ಸುತ್ತ ಸುತ್ತುತ್ತಿದೆ.

    ಆರಂಭದಲ್ಲಿ ವಂಶಿಬೆನ್ ಅವರ ಫಲಿತಾಂಶದ ಮಾರ್ಕ್​ಶೀಟ್​ನಲ್ಲಿ​ ಗುಜರಾತಿ ಮತ್ತು ಗಣಿತ ವಿಷಯಗಳ ಅಂಕಗಳಲ್ಲಿ ವ್ಯತ್ಯಾಸಗಳನ್ನು ತೋರಿಸಿದೆ. ಈಕೆಗೆ ಈ ಎರಡೂ ವಿಷಯಗಳಲ್ಲಿ ಕ್ರಮವಾಗಿ ಗರಿಷ್ಠ 200 ಅಂಕಗಳಿಗೆ 211 ಮತ್ತು 212 ಅಂಕಗಳು ದೊರೆತಿವೆ. ಆದರೆ ಫಲಿತಾಂಶ ಸಂಕಲನದ ಸಮಯದಲ್ಲಿ ಈ ದೋಷ ಸಂಭವಿಸಿದೆ ಎಂದು ನಂತರ ತಿಳಿದುಬಂದಿದೆ. ತರುವಾಯ, ಪರಿಷ್ಕೃತ ಫಲಿತಾಂಶ ಪಟ್ಟಿಯನ್ನು ನೀಡಲಾಗಿದೆ. ಗುಜರಾತಿ ವಿಷಯದಲ್ಲಿ 200ಕ್ಕೆ 191 ಅಂಕಗಳನ್ನು ಮತ್ತು ಗಣಿತದಲ್ಲಿ 200ಕ್ಕೆ 190 ಅಂಕಗಳನ್ನು ನೀಡಿ ಸರಿಪಡಿಸಲಾಗಿದೆ. ಉಳಿದ ವಿಷಯಗಳ ಅಂಕಗಳು ಬದಲಾಗದೆ ಉಳಿದಿವೆ.

    ವಂಶಿಬೆನ್ ತನ್ನ ರಿಸಲ್ಟ್​ ತನ್ನ ಕುಟುಂಬದೊಂದಿಗೆ ಹೆಮ್ಮೆಯಿಂದ ಹಂಚಿಕೊಂಡ ನಂತರ ಈ ತಪ್ಪು ಕಂಡುಬಂದಿದೆ. ಈ
    ಪ್ರಮಾದಕ್ಕೆ ಪ್ರತಿಕ್ರಿಯೆಯಾಗಿ, ಜಿಲ್ಲಾ ಶಿಕ್ಷಣ ಅಧಿಕಾರಿಗಳು ದೋಷದ ಕಾರಣವನ್ನು ನಿರ್ಧರಿಸಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ತನಿಖೆಯನ್ನು ಪ್ರಾರಂಭಿಸಿದ್ದಾರೆ.

    ಸಚಿವರ ಆಪ್ತನ ಮನೆ ಮೇಲೆ ದಾಳಿ: 30 ಕೋಟಿ ಪತ್ತೆ; 6 ಯಂತ್ರಗಳ ಮೂಲಕ ಇನ್ನೂ ಮುಂದುವರಿದಿದೆ ಹಣ ಎಣಿಕೆ

    25% ಕುಸಿದ ಟಾಟಾ ಕಂಪನಿ ಷೇರು ಬೆಲೆ: ಈ ಸ್ಟಾಕ್​ ಖರೀದಿಸಬೇಕೆ? ಇನ್ನಷ್ಟು ಕುಸಿತಕ್ಕೆ ಕಾಯಬೇಕೆ?

    ರಿಸರ್ವೇಶನ್​ ಕುರಿತು ರಾಹುಲ್​ ಗಾಂಧಿಯ ಮಹತ್ವದ ಘೋಷಣೆ: ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಶೇಕಡಾ 50ಕ್ಕಿಂತಲೂ ಹೆಚ್ಚು ಮೀಸಲಾತಿ ನೀಡುತ್ತೇವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts