ಪ್ರದೀಪ್​ ಈಶ್ವರ್​ಗೆ ಅವಳಿ ಜವಳಿ ಮಕ್ಕಳ ಬಯಕೆ! ಭೋಗನಂದೀಶ್ವರನ ಮೊರೆ ಹೋಗಿದ್ದೇಕೆ ಶಾಸಕ?

mcs
Published on

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿಯಲ್ಲಿ ಶ್ರೀ ಭೋಗನಂದೀಶ್ವರ ಸ್ವಾಮಿ ಜೋಡಿ ಬ್ರಹ್ಮ ರಥೋತ್ಸವ ಅದ್ಧೂರಿ ನಡೆಯಿತು. ನಂದಿಯ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯದ ರಥೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಸುಧಾಕರ್​, ಶಾಸಕ ಪ್ರದೀಪ್​ ಈಶ್ವರ್ ಅವರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.

ನಂದಿಯ ಶ್ರೀ ಭೋಗನಂದೀಶ್ವರಸ್ವಾಮಿ ದೇವಾಲಯದ ರಥೋತ್ಸವದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್​ ಈಶ್ವರ್, ನನಗೆ ಅವಳಿ ಜವಳಿ ಮಕ್ಕಳಾಗಲಿ, ಮುಂಬರುವ ದಿನಗಳಲ್ಲಿ ಸಚಿವರಾದ ಕೃಷ್ಣಭೈರೇಗೌಡ ಮತ್ತು ಡಾ ಎಂ.ಸಿ.ಸುಧಾಕರ್ ಇಬ್ಬರಿಗೂ ರಾಜ್ಯದ ಮುಖ್ಯಮಂತ್ರಿಗಳಾಗುವ ಅವಕಾಶ ಸಿಗಲಿ ಎಂದು ಶಾಸಕ ಪ್ರದೀಪ್ ಈಶ್ವರ್ ದೇವರನ್ನು ಪ್ರಾರ್ಥಿಸಿರುವುದಾಗಿ ಹೇಳಿದರು.

ಎಂ.ಸಿ.ಸುಧಾಕರ್ ಸಿಎಂ ಆಗಲಿ: ಕಳೆದ ವರ್ಷ ನಂದಿಯಲ್ಲಿ ಅಪಶಕುನ ಪ್ರಕರಣ ನಡೆದು, ಒಬ್ಬರು (ಮಾಜಿ ಸಚಿವ ಡಾ ಕೆ.ಸುಧಾಕರ್) ಮನೆಗೆ ಹೋದರು. ನಾನು ಶಾಸಕನಾಗಿ ಆಯ್ಕೆಯಾದೆ, ಇದಕ್ಕೆ ಕೃಷ್ಣಭೈರೇಗೌಡ ಮತ್ತು ಡಾ ಎಂ.ಸಿ.ಸುಧಾಕರ್ ಇಬ್ಬರು ಕಾರಣ. ಇವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿ, ಹಾಗೆಯೇ ನನಗೆ ಅವಳಿ ಜವಳಿ ಮಕ್ಕಳಾಗಲಿ, ಅವರನ್ನು ಸಚಿವ ಸುಧಾಕರ್‌ರೇ ಎಂಎಲ್‌ಎಗಳನ್ನಾಗಿ ಮಾಡಲಿ ಎಂದು ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.

ಆಶೀರ್ವಾದ ಪಡೆದ ದಂಪತಿ: ಪ್ರದೀಪ್ ಈಶ್ವರ್ ದಂಪತಿ ಜಾತ್ರೆಯಲ್ಲಿ ಸಚಿವರಾದ ಡಾ ಎಂ.ಸಿ.ಸುಧಾಕರ್, ಕೆ.ಚ್.ಮುನಿಯಪ್ಪ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net