More

    ವಿದ್ಯಾರ್ಥಿ ಅನುಮಾನಾಸ್ಪದ ಸಾವು ಪ್ರಕರಣ: ಸಿಬಿಐ ತನಿಖೆಗೆ

    ಕೇರಳ: ವಯನಾಡಿನ ಪೂಕೋಡ್‌ನಲ್ಲಿರುವ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಸಾವಿನ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಲು ಕೇರಳ ಸರ್ಕಾರ ನಿರ್ಧರಿಸಿದೆ.

    ಇದನ್ನೂ ಓದಿ: ಇಂಗ್ಲೆಂಡ್​​ ವಿರುದ್ಧ ಟೀಂ ಇಂಡಿಯಾಗೆ ಭರ್ಜರಿ ಗೆಲುವು! ಸರಣಿ ಕೈವಶ ಮಾಡಿಕೊಂಡ ರೋಹಿತ್​ ಪಡೆ 

    ಪೊಲೀಸರ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದರೂ, ಶನಿವಾರ ಮೃತ ವಿದ್ಯಾರ್ಥಿಯ ಪೋಷಕರ ಮನವಿಯನ್ನು ಪರಿಗಣಿಸಿ ಸಿಬಿಐ ತನಿಖೆಗೆ ಒಪ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ವಯನಾಡಿನ ಪೂಕೋಡ್‌ನಲ್ಲಿರುವ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಜೆ.ಎಸ್ ಸಿದ್ಧಾರ್ಥನ್ ಫೆ.18 ರಂದು ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನ ಶೌಚಾಲಯದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖಿಸಿರುವಂತೆ ಮಗನಿಗೆ ಆಗಿರುವ ಗಾಯಗಳ ಹಿನ್ನೆಲೆಯಲ್ಲಿ ಸಿದ್ಧಾರ್ಥನ್ ನೇಣು ಬಿಗಿದುಕೊಳ್ಳಲು ಸಹ ನಿಲ್ಲಲು ಸಾಧ್ಯವಿರಲಿಲ್ಲ ಎಂದು ಹಲವು ವೈದ್ಯರು ಹೇಳಿದ್ದಾರೆ ಎಂದು ಸಿಎಂಗೆ ತಿಳಿಸಿರುವುದಾಗಿ ಅವರು ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಮೃತ ವಿದ್ಯಾರ್ಥಿಯ ತಂದೆ, ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಾಗಿ ನನ್ನ ಮಗನನ್ನು ಹತ್ಯೆ ಮಾಡಲಾಗಿದೆ ಎಂದು ಸಿಎಂ ಅವರಿಗೆ ತಿಳಿಸಿದ್ದೇನೆ. ಹಾಗೂ ಪ್ರಕರಣದಲ್ಲಿ ಕೇವಲ ಹಾಸ್ಟೆಲ್‌ನ ಸಹಾಯಕ ವಾರ್ಡನ್‌ನ ಅಮಾನತು ಸಾಕಾಗುವುದಿಲ್ಲ ಎಂದು ಆಗ್ರಹಿಸಿದ್ದಾರೆ.

    ಹಾಸ್ಟೆಲ್‌ನ ಸಹಾಯಕ ವಾರ್ಡನ್‌ನನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ಕಾನೂನು ಕ್ರಮ ಎದುರಿಸಬೇಕು. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದರೆ, ಡೀನ್ ಮತ್ತು ಸಹಾಯಕ ವಾರ್ಡನ್ ಬಗ್ಗೆ ಆ ಏಜೆನ್ಸಿಗೆ ಹೇಳಲು ಇನ್ನೂ ಬಹಳಷ್ಟು ಇದೆ ಎಂದು ಹೇಳಿದರು.

    ಮೃತ ಸಿದ್ದಾರ್ಥನ ಮೇಲೆ ಹಲ್ಲೆ ನಡೆಸಲು ಬೆಲ್ಟ್ ಮತ್ತು ಕೇಬಲ್ ವೈರ್ ಬಳಸಲಾಗಿದೆ ಎಂದು ಆರೋಪ ಮಾಡಲಾಗಿದೆ.
    ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೂರು ದಿನಗಳ ಕಾಲ ಅವರು ಅನುಭವಿಸಿದ ಕ್ರೂರ ಚಿತ್ರಹಿಂಸೆ ಬಹಿರಂಗವಾಗಿದೆ. ಈ ಪ್ರಕರಣದ ಆರೋಪಿಗಳಲ್ಲಿ ಆಡಳಿತಾರೂಢ ಸಿಪಿಎಂನ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಕಾರ್ಯಕರ್ತರಿದ್ದಾರೆ ಇದರಿಂದ ರಾಜ್ಯ ಸರ್ಕಾರ ಅರೋಪಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಬಲವಾದ ಆರೋಪ ಕೇಳಿಬಂದಿತ್ತು.

    ರಾಜಕೀಯಕ್ಕೆ ಅಖಾಡಕ್ಕೆ ಟಾಲಿವುಡ್ ನಟ! ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts