

ಗೋಣಿಕೊಪ್ಪಲು: ಚೆಕ್ಕೇರ ಒಕ್ಕ, ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಹುದಿಕೇರಿ ಜನತಾ ಪ್ರೌಢಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚೆಕ್ಕೇರ ಕ್ರಿಕೆಟ್ ನಮ್ಮೆಯಲ್ಲಿ 6 ಪುರುಷ ಮತ್ತು 5 ಮಹಿಳಾ ತಂಡಗಳು ಮುನ್ನಡೆ ಪಡೆದುಕೊಂಡಿವೆ.
ಅಜ್ಜಿಕುಟ್ಟಿರ ಮತ್ತು ಕಾಳಿಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಜ್ಜಿಕುಟ್ಟಿರ ತಂಡ ನಿಗದಿತ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 21ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಕಾಳಿಮಾಡ ತಂಡಕ್ಕೆ 1ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಮಾಚಿಮಂಡ ಮತ್ತು ಆಪಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಪಟ್ಟಿರ ತಂಡ ನಿಗದಿತ 6 ಓವರ್‌ಗಳಲ್ಲಿ 3ವಿಕೆಟ್ ನಷ್ಟಕ್ಕೆ 48ರನ್‌ಗಳಿಸಿತು. ಮಾಚಿಮಂಡ ತಂಡ 2ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಕುಂದತ್ ಮಾಳೇಟಿರ ಮತ್ತು ಕರವಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರವಟ್ಟಿರ ತಂಡ ನಿಗದಿತ 6 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 90ರನ್ ಗಳಿಸಿತು. ಕುಂದತ್ ಕರವಟ್ಟಿರ 6ವಿಕೆಟ್ ನಷ್ಟಕ್ಕೆ 55 ರನ್ ಗಳಿಸಲಷ್ಟೇ ಶಕ್ತವಾಯ್ತು.
ನಾಗಚೆಟ್ಟಿರ ಮತ್ತು ತಾತಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಗಚೆಟ್ಟಿರ ತಂಡ ನಿಗದಿತ 6 ಓವರ್‌ಗಳಲ್ಲಿ 1ವಿಕೆಟ್‌ನಷ್ಟಕ್ಕೆ 75 ರನ್‌ಗಳಿಸಿತು. ತಾತಪಂಡ ತಂಡ 1ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಅಚ್ಚಪಂಡ ಮತ್ತು ಕೊಟ್ರಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಟ್ರಂಗಡ ತಂಡ ನಿಗದಿತ 6 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 48ರನ್ ಗಳಿಸಿತು. ಅಚ್ಚಪಂಡ ತಂಡ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು.
ಅಯ್ಯಮಡ ಮತ್ತು ಬೊಳಂದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬೊಳಂದಂಡ ತಂಡ ನಿಗದಿತ 6 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 73ರನ್ ಗಳಿಸಿತು. ಅಯ್ಯಮಡ ತಂಡ 3ವಿಕೆಟ್ ನಷ್ಟಕ್ಕೆ 53 ರನ್‌ಗಳಿಸಿತು.
ಕುಟ್ಟಂಡ ಮತ್ತು ಅರೆಯಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅರೆಯಡ ಬಾರದ ಕಾರಣ ಕುಟ್ಟಂಡ ತಂಡ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು.
ಮಹಿಳಾ ಪಂದ್ಯ: ಚಿಮ್ಮಣಮಾಡ ಮತ್ತು ನಂದೇಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಂದೇಟಿರ ತಂಡ ನಿಗದಿತ 6 ಓವರ್‌ಗಳಲ್ಲಿ 3ವಿಕೆಟ್ ನಷ್ಟಕ್ಕೆ 41ರನ್ ಗಳಿಸಿತು. ಚಿಮ್ಮಣಮಾಡ ತಂಡ 1ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.
ಕರಿನೆರವಂಡ ಮತ್ತು ಅಜ್ಜಿನಿಕಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರಿನೆರವಂಡ ತಂಡ ನಿಗದಿತ 6 ಓವರ್‌ಗಳಲ್ಲಿ 3ವಿಕೆಟ್ ನಷ್ಟಕ್ಕೆ 87ರನ್ ಗಳಿಸಿತು. ಅಜ್ಜಿನಿಕಂಡ ತಂಡ 5ವಿಕೆಟ್ ನಷ್ಟಕ್ಕೆ 49 ರನ್ ಗಳಿಸಲಷ್ಟೇ ಶಕ್ತವಾಯ್ತು.
ಮಾಚಿಮಾಡ ಮತ್ತು ಕೊಟ್ಟಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಟ್ಟಂಗಡ ತಂಡ ನಿಗದಿತ 6 ಓವರ್‌ಗಳಲ್ಲಿ 3ವಿಕೆಟ್ ಕಳೆದುಕೊಂಡು 40 ರನ್ ಗಳಿಸಿತು. ಮಾಚಿಮಾಡ ತಂಡ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು.
ಚೇಂದೀರ ಮತ್ತು ಮುಕ್ಕಾಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೇಂದೀರ ತಂಡ ನಿಗದಿತ 6 ಓವರ್‌ಗಳಲ್ಲಿ 3ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿತು. ಮುಕ್ಕಾಟಿರ ತಂಡ 1ವಿಕೆಟ್ ನಷ್ಟಕ್ಕೆ 65 ರನ್ ಗಳಿಸಲಷ್ಟೇ ಶಕ್ತವಾಯ್ತು.
ಕ್ರಿಕೆಟ್ ಆಡಿ ಗಮನ ಸೆಳೆದ ಶಾಸಕ ಪೊನ್ನಣ್ಣ : ಪಂದ್ಯಾವಳಿಯ ವಿಶೇಷ ಅತಿಥಿಯಾಗಿ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಭಾಗವಹಿಸಿ ಶುಭ ಕೋರಿದರು.
ಕೊಡಗಿನ ಕೊಡವ ಕುಟುಂಬಸ್ಥರ ನಡುವೆ ನಡೆಯುತ್ತಿರುವ ಪ್ರತಿಷ್ಠಿತ ಚೆಕ್ಕೇರ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ, ಹಲವು ಪ್ರಬಲ ಕ್ರಿಕೆಟ್ ಕುಟುಂಬಗಳು ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸೆಣಸಾಟ ನಡೆಸುತ್ತಿದೆ. ಪಂದ್ಯವು ಆರೋಗ್ಯಕರ ಸೆಣಸಾಟದಿಂದ ಕೂಡಿರಲಿ ಹಾಗೂ ಗೆಲುವಿನ ಸಂಭ್ರಮವನ್ನು ಎಲ್ಲರೂ ಖುಷಿಯಿಂದ ಆಸ್ವಾದಿಸುವಂತಾಗಲಿ ಎಂದು ಹಾರೈಸಿದರು.
ಕ್ರಿಕೆಟ್ ಆಯೋಜಕರ ಪರಿಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಶಾಸಕರು, ಮುಂದಿನ ದಿನಗಳಲ್ಲಿ ಪಂದ್ಯಾಟವು ಮತ್ತಷ್ಟು ಪ್ರಬಲವಾಗಿ ಮೂಡಿಬರಲಿ ಎಂದು ಹಾರೈಸಿದರು.
ಕ್ರಿಕೆಟ್ ತಂಡಗಳ ಸದಸ್ಯರೊಂದಿಗೆ ಹಲವು ಸಮಯ ಕಳೆದು ಅಜ್ಜಿಕುಟ್ಟಿರ ತಂಡದ ಪರವಾಗಿ ಆಟವಾಡಿದರು.