ಬುದ್ಧನ ಮೂರ್ತಿಗೆ ನಮಿಸಿದ ಶಾಸಕ

11 HANUR 1
Published on

ಹನೂರು: ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ತಾಲೂಕಿನ ಚನ್ನಾಲಿಂಗನಹಳ್ಳಿ ಜೇತವನ ಬೌದ್ಧ ವಿಹಾರಕ್ಕೆ ಭಾನುವಾರ ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಬುದ್ಧನ ಮೂರ್ತಿಗೆ ನಮನ ಸಲ್ಲಿಸಿದರು.

ವಿಹಾರಕ್ಕೆ ಆಗಮಿಸಿದ ಶಾಸಕರನ್ನು ಮನೋರಖ್ಖಿತ ಬಂತೇಜಿ ಹಾಗೂ ಅನುಯಾಯಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಬೋಧಿ ವೃಕ್ಷದ ಸುತ್ತ ಪ್ರದಕ್ಷಿಣೆ ಹಾಕಿದ ಶಾಸಕರು ಬುದ್ಧ ಮೂರ್ತಿಯ ಸ್ಥಳಕ್ಕೆ ತೆರಳಿ ಪೂಜೆ ಹಾಗೂ ವಂದನೆ ಸಲ್ಲಿಸಿದರು. ಈ ವೇಳೆ ಮನೋರಖ್ಖಿತ ಬಂತೇಜಿ ಅವರು ಬುದ್ಧ ತತ್ವವನ್ನು ಪಠಿಸಿ ಪಾಲಿಸುವಂತೆ ಸಲಹೆ ನೀಡಿದರು. ಇದೇ ವೇಳೆ ಜೇತವನ ಬೌದ್ಧ ವಿಹಾರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಿದರು. ಇದಕ್ಕೆ ಶಾಸಕರು ಸರ್ಕಾರದಿಂದ ಅನುದಾನ ಕೊಡಿಸಿ ಕೊಡುವುದಾಗಿ ಭರವಸೆ ನೀಡಿದರು.

ಶಿಕ್ಷಕ ಮಹದೇವಕುಮಾರ್, ಮುಖಂಡರಾದ ವೆಂಕಟೇಶ್, ರಾಚಪ್ಪ, ಮಾದಯ್ಯ, ಮಹೇಶ್, ತೇಲಯ್ಯ, ಮಾದೇಶ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net