ದೇಶ ಸೇವೆ ಮಾಡಲು ಮನಸ್ಸು ಮಾಡಿ

hagarabommanahalli
ಹಗರಿಬೊಮ್ಮನಹಳ್ಳಿ ತಾಲೂಕಿನ ಕಡಲಬಾಳು ಗ್ರಾಮದಲ್ಲಿ ಮಾಜಿ ಸೈನಿಕ ಅಣಜಿ ಸುರೇಶ್‌ಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
Published on

ಹಗರಿಬೊಮ್ಮನಹಳ್ಳಿ: ಪಟ್ಟಣದಿಂದ ತಾಲೂಕಿನ ಕಡಲಬಾಳು ಗ್ರಾಮದವರೆಗೆ ಅದ್ದೂರಿ ಮೆರೆವಣಿಗೆಯೊಂದಿಗೆ ನಿವೃತ್ತಿ ಹೊಂದಿದ ಯೋಧ ಅಣಜಿ ಸುರೇಶ್ ಅವರನ್ನು ಸ್ವಾಗತಿಸಲಾಯಿತು.

ದೇಶ ಸೇವೆ ಮಾಡುವುದು ಅತ್ಯುತ್ತಮ ಕಾರ್ಯ

ಗ್ರಾಮಸ್ಥರು, ಯುವಕರು, ಅಭಿಮಾನಿಗಳು, ವಿದ್ಯಾರ್ಥಿಗಳು 75 ಅಡಿ ಉದ್ದದ ತಿರಂಗ ಧ್ವಜವನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಿ ಹೃದಯ ಸ್ಪರ್ಶಿ ಸ್ವಾಗತ ಕೋರಿದರು. ಗ್ರಾಮದ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಕೆ.ನೇಮಿರಾಜ ನಾಯ್ಕ ಮಾತನಾಡಿ, ದೇಶ ಸೇವೆಗೆ ಸೈನಿಕನಾಗಿ ಕರ್ತವ್ಯ ಸಲ್ಲಿಸುವುದು ಅತ್ಯುತ್ತಮ ಕಾರ್ಯವಾಗಿದೆ. ಇಂದಿನ ಯುವಕರು ದೇಶ ಸೇವೆ ಮಾಡಲು ಮನಸ್ಸು ಮಾಡಲಿ. ಯೋಧ ಅಣಜಿ ಸುರೇಶ್‌ಅವರು 20 ವರ್ಷ ದೇಶ ಸೇವೆ ಮಾಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈಗಾಗಲೇ ಗಡಿಯಲ್ಲಿ ರಕ್ಷಣಾ ಸೇವೆಗೆ ಕಡಲಬಾಳು ಗ್ರಾಮದ ಒಂದೇ ಕುಟುಂಬದಿಂದ ಇಬ್ಬರು ಸೇವೆ ಮಾಡಿದ್ದಾರೆ. ಒಬ್ಬರು ನಿವೃತ್ತಿ ಹೊಂದಿದರೆ, ಇನ್ನೊಬ್ಬರು 23 ವರ್ಷಗಳಿಂದ ಬಿಎಸ್‌ಎಫ್‌ನಲ್ಲಿ ಅಣಜಿ ಅಂಜಿನಪ್ಪ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ರಾಜಸ್ತಾನದ ಪಾಕಿಸ್ತಾನ ಗಡಿಯಲ್ಲಿ ಕರ್ತವ್ಯ ನಿರತರಾಗಿದ್ದಾರೆ. ಅವರ ತಂದೆ ಅಣಜಿ ಬಸವರಾಜ, ತಾಯಿ ರೇಣುಕಮ್ಮಗೆ ತಾಲೂಕಿನ ಪರವಾಗಿ ಜನತೆಗೆ ಅಭಾರಿಯಾಗಿದ್ದೇನೆ ಎಂದು ತಿಳಿಸಿದರು.

ಮಾಜಿ ಸೈನಿಕರಾದ ಅಣಜಿ ಸುರೇಶ್, ನೀಲಪ್ಪನವರ ಶೇಖರ್, ಪೂಜಾರ ರಾಘವೇಂದ್ರ ಸೇವಾ ಅನುಭವಗಳನ್ನು ಹಂಚಿಕೊಂಡರು. ಬಳಿಕ ಅವರನ್ನು ಗೌರವಿಸಲಾಯಿತು. ಹೂವಿನಹಡಗಲಿ ಗವಿಶಾಖಾ ಮಠದ ಡಾ.ಹಿರಿಯ ಶಿವಶಾಂತವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖ ಇಟಿಗಿ ಶಶಿಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net