ಕೋಡಿ ಮಠಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಭೇಟಿ

oppo_2
oppo_2
Published on

ಅರಸೀಕೆರೆ ಗ್ರಾಮಾಂತರ: ಗುರುಪೂರ್ಣಿಮೆ ಅಂಗವಾಗಿ ಸುಕ್ಷೇತ್ರ ಹಾರನಹಳ್ಳಿ ಕೋಡಿ ಮಠಕ್ಕೆ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ. ಶಿವಲಿಂಗೇಗೌಡ ಭೇಟಿ ನೀಡಿ ಪೀಠಾಧ್ಯಕ್ಷ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.


ಕೆ.ಎಂ.ಶಿವಲಿಂಗೇಗೌಡರಿಂದ ಗೌರವ ಸಮರ್ಪಣೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು, ಮಠಕ್ಕೆ ಭಕ್ತರೆ ಆಸ್ತಿ. ಭಕ್ತರಿಗೆ ಮಠವೇ ಆಸ್ತಿ. ಈ ರೀತಿಯ ಅವಿನಾಭಾವ ಸಂಬಂಧ ಜಾತಿ, ಮತ, ಪಂಥ ಮೀರಿದ ರೀತಿ ಹಾಗೂ ಧಾರ್ಮಿಕ ನೀತಿ ಕೋಡಿ ಮಠದ್ದಾಗಿದೆ. ಮಠದಲ್ಲಿ ಬಡವ-ಬಲ್ಲಿದ, ಮೇಲು-ಕೀಳು ಎಂಬುದಿಲ್ಲ. ಸರ್ವರು ಸಮಾನರು. ಸಮಾಜದಲ್ಲಿ ಸಾಮರಸ್ಯದಿಂದ ಎಲ್ಲರೂ ಬಾಳಬೇಕು ಎಂದರು.


ಗುರು ಪೂರ್ಣಿಮೆ ಪ್ರಯುಕ್ತ ಮುಂಜಾನೆಯಿಂದಲೇ ಕ್ಷೇತ್ರದಲ್ಲಿ ಹೋಮ-ಹವನ, ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಶಿವಲಿಂಗಜ್ಜಯ್ಯ ಹಾಗೂ ನೀಲಂಬಜ್ಜಯ್ಯನ ಗದ್ದಿಗೆ ಕ್ಷೀರಾಭಿಷೇಕ, ಬಿಲ್ವಾರ್ಚನೆ ನಡೆದವು. ಸಾವಿರಾರು ಭಕ್ತರು ಆಗಮಿಸಿದ್ದರು. ಎಲ್ಲರಿಗೂ ಅನ್ನಸಂತರ್ಪಣೆ ಅನ್ನಸಂತರ್ಪಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net