ಮನೆ ಹಾನಿ ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದ ಶಾಸಕ ಹೆಬ್ಬಾರ್

27 ylp 01 (parihara)
Published on

ಯಲ್ಲಾಪುರ: ತಾಲೂಕಿನ ವಿವಿಧೆಡೆ ಮಳೆಯಿಂದ ಮನೆಗಳಿಗೆ ಹಾನಿ ಉಂಟಾದ ಸಂತ್ರಸ್ತರಿಗೆ ಶನಿವಾರ ಶಾಸಕ ಶಿವರಾಮ ಹೆಬ್ಬಾರ್ ತಮ್ಮ ಕಾರ್ಯಾಲಯದಲ್ಲಿ ಪರಿಹಾರ ಧನದ ಚೆಕ್ ವಿತರಿಸಿದರು.
ಜನ್ನು ಬೀರು ಬೋಡಕರ್, ವಿಠ್ಠು ಬೈರು ಆಡೋಳಕರ, ಸೀತಾ ಶಿಲಾಧಾರ ಲಮಾಣಿ, ಸವಿತಾ ಸಿದ್ದಪ್ಪ ಭೋವಿವಡ್ಡರ, ಸುಶೀಲಾ ವೆಂಕಟೇಶ ಭೋವಿವಡ್ಡರ, ವೆಂಕಣ್ಣ ಕೃಷ್ಣ ಕುಣಬಿ, ಉಮಾಶಂಕರ ತಮ್ಮಣ್ಣ ಮರಾಠಿ ಅವರಿಗೆ ತಲಾ 1,20 ಲಕ್ಷ ರೂಪಾಯಿ ಹಾಗೂ ನಾಗರಾಜ ಶ್ಯಾಮು ಶಿಂಧೆ ಅವರಿಗೆ 37,500 ರೂಪಾಯಿ ಚೆಕ್ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಮಳೆಯಿಂದ ಹಾನಿಗೊಳಗಾದವರಿಗೆ ತಕ್ಷಣ ಪರಿಹಾರ ವಿತರಿಸಿ, ಧೈರ್ಯ ತುಂಬಲು ಕ್ರಮ ಕೈಗೊಳ್ಳಲಾಗುತ್ತಿದೆ. ಪರಿಹಾರ ನೀಡಲು ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಎಂದರು.
ಜಿಪಂ ಮಾಜಿ ಸದಸ್ಯ ವಿಜಯ ಮಿರಾಶಿ, ಚಂದಗುಳಿ ಗ್ರಾಪಂ ಸದಸ್ಯ ಆರ್.ಎಸ್. ಭಟ್ಟ, ತಹಸೀಲ್ದಾರ್ ಅಶೋಕ ಭಟ್ಟ, ಗ್ರೇಡ್-2 ತಹಸೀಲ್ದಾರ ಸಿ.ಜಿ. ನಾಯ್ಕ, ಚಂದಗುಳಿ ಪಿಡಿಒ ರಾಜೇಶ ಶೇಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net