ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ರಾಜೀನಾಮೆ

IMG-20230331-WA0030
Published on

ಶಿರಸಿ:ಕೂಡ್ಲಗಿ ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಬಿಜೆಪಿ ಶಾಸಕ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದರು‌.

ಶಿರಸಿಯಲ್ಲಿರುವ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಚೇರಿಗೆ ಬಂದು ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದರು.

ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಗೆ ಸೇರ್ಪಡೆ ಯಾಗಲಿರುವ ಎನ್. ವೈ. ಗೋಪಾಲಕೃಷ್ಣ,‌ನಾಲ್ಕು ಬಾರಿ ಮೊಳಕಾಲ್ಮೂರು ನಲ್ಲಿ,  ಒಂದು ಬಾರಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಹಾಗೂ ಸಧ್ಯ ಕೂಡ್ಲಿಗಿ ಶಾಸಕರಾಗಿದ್ದರು..

ಎನ್. ವೈ. ಗೋಪಾಲಕೃಷ್ಣ ಹಾಗೂ ಸ್ಪೀಕರ್ ಕಾಗೇರಿ ಗೌಪ್ಯ ಸಭೆ ನಡೆಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net