ವಿಪಕ್ಷಗಳ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗು 15 ಕೋಟಿ

Param11
Published on

ತುಮಕೂರು: ಮುಂಬರುವ ದಿನಗಳಲ್ಲಿ ವಿಪಕ್ಷಗಳ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗು 10&15 ಕೋಟಿ ರೂ., ಅನುದಾನ ನೀಡಲಿದ್ದೇವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ನಗರದಲ್ಲಿ ಸಿಎಂ ಕಾರ್ಯಕ್ರಮ ಸಿದ್ಧತೆ ಪರಿಶೀಲನೆ ಬಳಿಕ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಆ ಪಕ್ಷದ ಶಾಸಕರಿಗೆ 50 ಕೋಟಿ ಅನುದಾನವನ್ನು ಕಾಂಗ್ರೆಸ್​ ಶಾಸಕರಿಗೆ ಕೇವಲ 10&15 ಕೋಟಿ ಕೊಡುತ್ತಿದ್ದರು ಎಂದು ಸಿಎಂಗೆ ಕಪು$್ಪ ಪಟ್ಟಿ ಪ್ರದರ್ಶಿಸುವ ಜಿಲ್ಲೆ ಎನ್​ಡಿಎ ಶಾಸಕರಿಗೆ ಎಚ್ಚರಿಕೆಗೆ ಪರೋಕ್ಷ$ವಾಗಿ ಟಾಂಗ್​ ಕೊಟ್ಟರು.

ಮುಂಬರುವ ದಿನಗಳಲ್ಲಿ ವಿಪಕ್ಷ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಿದ್ದು ಆತಂಕ ಪಡುವುದು ಬೇಡ. ನಮ್ಮ ಜಿಲ್ಲೆಯ ಜವಾಬ್ದಾರಿಯನ್ನು ನಾನು ಹಾಗೂ ರಾಜಣ್ಣ ತೆಗೆದುಕೊಳ್ಳುತ್ತೀವಿ. ಎಲ್ಲಾ ಕ್ಷೇತ್ರದ ಅಭಿವೃದ್ಧಿ ಆದರೆ ರಾಜ್ಯ ಅಭಿವೃದ್ಧಿ ಆಗಲಿದೆ. ಜಿಲ್ಲೆಯ ವಿಪಕ್ಷ ಶಾಸಕರು ಕಪು$್ಪ ಬಾವುಟ ತೋರಿಸುವ ಅಗತ್ಯವಿಲ್ಲ. ಅವರಿಗು ಹಣಬರಲಿದೆ. ನಮ್ಮ ಶಾಸಕರಿಗೆ 25 ಕೋಟಿ ಅನುದಾನ ಕೊಡುತ್ತೀವಿ. ವಿಪಕ್ಷ ಶಾಸಕರಿಗೆ 10-&15 ಕೋಟಿ ಅನುದಾನ ಬರಲಿದೆ ಎಂದರು.

ವರ್ಷದ ಹಿಂದೆ ತುಮಕೂರು ಗ್ರಾಮಾಂತರ ಕ್ಷೇತ್ರದ ನಾಗವಲ್ಲಿ ಪಬ್ಲಿಕ್​ ಶಾಲೆಗೆ ಮೂಲಸೌಕರ್ಯಗಳನ್ನು ಕಲ್ಪಿಸಲು 1.21 ಕೋ.ರೂ., ಕಾಮಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದ ಸಿಎಂ ಇದುವರೆಗೆ ಬಿಡಿಗಾಸನ್ನು ಬಿಡುಗಡೆ ಮಾಡಿಲ್ಲ. ಈ ಹಣನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ವಾಪಸು ತೆಗೆದುಕೊಂಡಿದ್ದಾರೆ. ಇದು ವಚನ ದ್ರೋಹ ಮತ್ತ ಕನ್ನಡ ಮತ್ತ ಸರ್ಕಾರಿ ಶಾಲೆಗಳ ವಿರೋಧಿ ಧೋರಣೆ. ಬಿ.ಸುರೇಶಗೌಡ ಗ್ರಾಮಾಂತರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net