ಗೆದ್ದ ಮೇಲೆ ಕಾರ್ಯಕರ್ತರನ್ನು ಅಭಿನಂದಿಸಿದ ಶಾಸಕ ದಿನಕರ

BJP workers abinandane in kumta
Published on

ಕುಮಟಾ: ನನ್ನ ಗೆಲುವಿಗೆ ಕುಮಟಾ ತಾಲೂಕಿನ ಮತದಾರರು ಭದ್ರಬುನಾದಿ ಹಾಕಿದರೆ, ಹೊನ್ನಾವರ ತಾಲೂಕಿನ ಮತದಾರರು ವಿಜಯದ ಕಿರೀಟ ತೊಡಿಸಿದರು. ಈ ಗೆಲುವಿಗೆ ಕಾರ್ಯಕರ್ತರ ಪರಿಶ್ರಮವೇ ಮುಖ್ಯ ಕಾರಣ. ಅವರಿಗಾಗಿ ನಾನು ಯಾವ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.


ಪಟ್ಟಣದ ಹವ್ಯಕ ಸಭಾಮಂಟಪದಲ್ಲಿ ಶನಿವಾರ ಕುಮಟಾ ಮತ್ತು ಹೊನ್ನಾವರ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.


ಕಳೆದ 5 ವರ್ಷಗಳಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದರೂ ಒಂದಷ್ಟು ಮತದಾರರು ವಿರೋಧಿಗಳ ಅಪಪ್ರಚಾರವನ್ನು ನಂಬಿದರು. ಆದರೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿ ಹಳ್ಳಿಗಳಿಗೆ ತೆರಳಿ, ಹಗಲು-ರಾತ್ರಿಯನ್ನದೇ ಮತದಾರರ ಮನಮುಟ್ಟುವ ಕೆಲಸ ಮಾಡಿದರು. ಅವರ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಕಾಂಗ್ರೆಸ್‌ನ ಪುಕ್ಕಟೆ ಭರವಸೆಗಳಿಗೆ ಮರುಳಾಗಿ ಮತದಾರರು ಕಾಂಗ್ರೆಸ್ ಅ್ನು ಗೆಲ್ಲಿಸಿದ್ದಾರೆ. ಆದರೆ, ವು ಮತದಾರರ ವಿಶ್ವಾಸ ಕಳೆದುಕೊಂಡಿಲ್ಲ. ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕಾ ಪಂಚಾಯಿತಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಗೆಲುವು ಗಳಿಸಬೇಕಿದೆ ಎಂದರು.

ಅಪಪ್ರಚಾರ ನಡೆಸಿದ್ದರಿಂದ ಪಕ್ಷ ಸೋಲು ಅನುಭವಿಸಬೇಕಾಯಿತು. ಅಧಿಕಾರ ಇದ್ದರೂ, ಇಲ್ಲದಿದ್ದರೂ ನಮ್ಮ ಸಂಘಟನೆ ನಿರಂತರ. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲಾಗುವುದು.--- ವೆಂಕಟೇಶ ನಾಯಕ, ಬಿಜೆಪಿ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net