ಮೃತ ಬಾಲಕರ ನಿವಾಸಕ್ಕೆ ಶಾಸಕ ಭೇಟಿ

IMG-20240526-WA0176
Published on

ಆಲೂರು: ಇತ್ತೀಚೆಗೆ ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದ ಮುತ್ತಿಗೆ ಗ್ರಾಮದ ನಾಲ್ವರು ಬಾಲಕರ ನಿವಾಸಗಳಿಗೆ ಶಾಸಕ ಸಿಮೆಂಟ್ ಮಂಜುನಾಥ್ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು.


ಬಳಿಕ ಮಾತನಾಡಿದ ಅವರು, ಬೇಸಿಗೆಯಲ್ಲಿ ಕೆರೆ, ನದಿಗಳಿಗೆ ಮಕ್ಕಳು ಈಜಲು ತೆರಳುವುದು ಸಹಜವಾಗಿದೆ. ಈ ಬಗ್ಗೆ ಪಾಲಕರು ಎಚ್ಚರವಹಿಸಬೇಕು. ಈಗಿರುವ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತೇನೆ. ಸರ್ಕಾರದಿಂದ ಸಿಗುವ ಪರಿಹಾರವನ್ನು ಕೊಡಿಸಲು ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.


ಆಲೂರು ಕಟ್ಟಾಯ ಮಂಡಲ ಬಿಜೆಪಿ ಅಧ್ಯಕ್ಷೆ ಉಮಾ ರವಿಪ್ರಕಾಶ್, ತಾಲೂಕು ಎಸ್ಸಿ ಮೋರ್ಚಾದ ಬಾಬಲೋಚನ, ಆಲೂರು ಪಟ್ಟಣದ ಬೂತ್ ಅಧ್ಯಕ್ಷೆ ಕರಿಯಮ್ಮ, ಕರಬೈರಾಪುರ ಗ್ರಾಮ ಪಂಚಾಯಿತಿ ಸದಸ್ಯರಾದ ರುದ್ರೇಶ್ ಗೌಡ, ಗಣೇಶ್, ಮುಖಂಡರಾದ ಹನುಮಂತೇಗೌಡ, ಕಣಗಾಲ್ ಲೋಕೇಶ್, ರವಿ, ದೊರೇಗೌಡ ಇದ್ದರು. ತಾಲೂಕಿನ ಕದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಿಗೆ ಗ್ರಾಮದ ಬಳಿರುವ ತೋಟದಮ್ಮನ ಕೆರೆಗೆ ಮುತ್ತಿಗೆ ಗ್ರಾಮದ ಕೆರೆಯಲ್ಲಿ ಜೀವನ್, ಸಾತ್ವಿಕ್, ವಿಶ್ವ, ಪೃಥ್ವಿ ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net