

ನರಗುಂದ; ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಆವರಣದ ಗೋಡೆಗಳಿಗೆ ನೈಸರ್ಗಿಕ, ಪರಿಸರ, ಸಾಲುಮರದ ತಿಮ್ಮಕ್ಕ ಹಾಗೂ ವಿವಿಧ ಐತಿಹಾಸಿಕ ಚಿತ್ರಕಲೆಗಳಿಗೆ ಚಿತ್ರಕಲೆ ಶಿಕ್ಷಕರು, ಶಾಲಾ ವಿದ್ಯಾರ್ಥಿನಿಯರು ಬಣ್ಣ ತುಂಬಿರುವುದನ್ನು ಕಂಡು ಶಾಸಕ ಸಿ.ಸಿ. ಪಾಟೀಲ ಇತ್ತೀಚೆಗೆ ವೀಕ್ಷಿಸಿ ಶ್ಲಾಘನೆ ವ್ಯಕ್ತಪಡಿಸಿದರು.
ನರಗುಂದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ, ತಾಲೂಕಿನ ಬನಹಟ್ಟಿ ಹಾಗೂ ಜಗಾಪೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗಳಿಗೆ ರಂಗೋತ್ಸವ ಕಾರ್ಯಕ್ರಮದಡಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬಿಡುಗಡೆಗೊಂಡಿರುವ ತಲಾ 10 ಸಾವಿರ ರೂಪಾಯಿ ವೆಚ್ಚದಲ್ಲಿ ಶಾಲಾ ಆವರಣ ಗೋಡೆಗಳಿಗೆ ಬಿಡಿಸಿರುವ ವಿವಿಧ ನೈಸರ್ಗಿಕ, ಭಾರತೀಯ ಕಲೆ, ಸಂಸ್ಕೃತಿ ಮತ್ತು ಸಾಂಸ್ಕೃತಿಕ ಇತಿಹಾಸ ಸಾರುವ ಕಲಾಕೃತಿಗಳ ಮೆರುಗು ಮಕ್ಕಳ ಮನಸಿಗೆ ಮುದ ನೀಡುತ್ತದೆ ಎಂದು ಶಾಸಕ ಸಿ.ಸಿ. ಪಾಟೀಲ ತಿಳಿಸಿದರು.
ಬಿಜೆಪಿ ಮುಖಂಡರಾದ ಎನ್.ಬಿ. ಗಾಡಿ, ಪ್ರಕಾಶಗೌಡ ತಿರಕನಗೌಡ್ರ, ಎಸ್.ಆರ್. ಪಾಟೀಲ, ನಾಗನಗೌಡ ತಿಮ್ಮನಗೌಡ್ರ,ಡಾ.ಸಿ.ಕೆ. ರಾಚನಗೌಡ್ರ, ಎಚ್.ಎನ್. ಗೋಟೂರ, ಶೇಖರಗೌಡ ಸಾಲಿಗೌಡ್ರ, ದೇವಣ್ಣ ಕಲಾಲ, ಪವಾಡೆಪ್ಪ ವಡ್ಡಿಗೇರಿ, ವಸಂತ ಜೋಗಣ್ಣವರ, ರಾಚನಗೌಡ ಪಾಟೀಲ, ಚಂದ್ರಗೌಡ ಪಾಟೀಲ, ಮಂಜು ಮಣಸಗಿ, ಎಸ್.ವಿ. ಕ್ಯಾಮನಗೌಡ್ರ, ಹುಡೇದಮನಿ, ಬಸವರಾಜ ನೆಗಳೂರ, ಭಾಗಿರಥಿ ಹೊಸಮನಿ, ಎಸ್.ಬಿ. ಹಿರೇಮಠ, ಶಾಲಾ ಮುಖ್ಯೋಪಾಧ್ಯಾಯ ಎಸ್.ಎಸ್. ಹಿರೇಮಠ, ಗಿರೀಶ ದಾಸರ, ಹನುಮಂತಪ್ಪ ಮಾದರ, ವಿ.ಎಲ್. ಹಿರೇಕೆರೂರ, ಬಿ.ಕೆ. ವಗ್ಗರ, ಆರ್.ಕೆ. ಅಲ್ಲಿಬಾಯಿ, ಎಂ.ಆರ್. ನಾಯಕ್, ಸಿ.ಎಲ್. ಮೂಗನೂರ, ಎಸ್.ಎಸ್. ಬಿರಾದಾರ, ಎ.ಜಿ. ಗೌಡರ, ವಿ.ವಿ. ಕಮಕೇರಿ ಉಪಸ್ಥಿತರಿದ್ದರು.