ಹುಮನಾಬಾದ ಶಾಸಕರ ಸಹೋದರನ ಬಂಧನ

AREST
Published on



ವಿಜಯವಾಣಿ ಸುದ್ದಿಜಾಲ ಹುಮನಾಬಾದ

ಹುಮನಾಬಾದ ಶಾಸಕರಾದ ಡಾ.ಸಿದ್ದಲಿಂಗಪ್ಪ ಪಾಟೀಲï ಅವರ ಸಹೋದರನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಸುನೀಲ (ಕಾಳಪ್ಪ) ಪಾಟೀಲï ಬಂಧಿತರು. ಇನ್ನಿಬ್ಬರು ಸಹೋದರರು ತಲೆಮರೆಸಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಹಾಗೂ ಸೂಕ್ಷö್ಮ ಪ್ರದೇಶಗಳಲ್ಲಿ ಭಾರಿ ಬಿಗಿ ಪೊಲೀಸ್ ಬಂದೋಬ¸್ತï ಮಾಡಲಾಗಿದೆ. ಹೀಗಾಗಿ ಹುಮನಾಬಾದ ಪಟ್ಟಣ ಖಾಕಿ ಕಣ್ಗಾವಲಿನಲ್ಲಿದೆ.
ಮೇ ೩೧ರಂದು ಕಠಳ್ಳಿ ಗ್ರಾಮದ ಬಸವರಾಜ ಶಿವರಾಜ ಪಾಟೀಲï ಎಂಬುವರ ಮೇಲೆ ಶಾಸಕರ ಇಬ್ಬರು ಸಹೋದರರು ಹಾಗೂ ಇನ್ನೂ ಕೆಲವರು ಕೂಡಿಕೊಂಡು ಹ¯್ಲÉ ನಡೆಸಿದ್ದರು.ಹುಮನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ನಡೆದ ಬೆಳವಣಿಗೆಯಲ್ಲಿ ಪ್ರಕರಣದಲ್ಲಿ ರಾಜಕೀಯ ಸೇರಿತು. ಮಾಜಿ ಸಚಿವ ರಾಜಶೇಖರ ಪಾಟೀಲï ಆಸ್ಪತ್ರೆಗೆ ಭೇಟಿ ನೀಡಿ ಹ¯್ಲÉಗೆ ಒಳಗಾದ ವ್ಯಕ್ತಿಯ ಆರೋಗ್ಯ ವಿಚಾರಿಸಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದರು. ಆಗ ಕೆಲ ಆರೋಪಿತರನ್ನು ಪೊಲೀಸರು ಬಂಧಿಸಿದರು. ಆದರೆ, ಶಾಸಕರ ಇಬ್ಬರು ಸಹೋದರರು ನಾಪತ್ತೆಯಾಗಿದ್ದರಿಂದ ಬಂಧಿಸಿರಲಿಲ್ಲ.
ಈಚೆಗೆ ಜರುಗಿದ ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲï, ಭೀಮರಾವ ಪಾಟೀಲï ಈ ಕುರಿತು ಧ್ವನಿ ಎತ್ತಿ, ಹ¯್ಲÉ ಮಾಡಿದ ಶಾಸಕರ ಸಹೋದರರನ್ನು ಬಂಧಿಸದ ಪೊಲೀಸರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕೂಡಲೇ ಬಂಧಿಸುವAತೆ ಆಗ್ರಹಿಸಿದ್ದರು.
ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ವಿವಿಧಡೆ ಶೋಧ ಕಾರ್ಯ ನಡೆಸಿ ಮಹಾರಾಷ್ಟçದ ತ್ರಿಂಬಕೇಶ್ವರದಲ್ಲಿ ಸುನೀಲ ಪಾಟೀಲï ಅವರನ್ನು ಬಂಧಿಸಿz್ದÁರೆ. ಇನ್ನೊಬ್ಬ ಸಹೋದರ ಸಂತೋಷ ಪಾಟೀಲï‌ರ ಶೋಧ ಮಾಡಲಾಗುತ್ತಿದೆ ಎಂದು ಎಸ್‌ಪಿ ಚನ್ನಬಸವಣ್ಣ ಲಂಗೋಟಿ ತಿಳಿಸಿz್ದÁರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net