ಮೊಟ್ಟೆ. ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆಗೆ ಶಾಸಕ ಬಣಕಾರ ಚಾಲನೆ

19 hkr 01-BANAKAR MOTTE
Published on

ಹಿರೇಕೆರೂರ: ಮಕ್ಕಳಿಗೆ ಪೌಷ್ಠಿಕಾಂಶದ ಕೊರತೆ ನೀಗಿಸುವ ಉದ್ದೇಶದಿಂದ ಸರ್ಕಾರ ಮೊಟ್ಟೆ. ಬಾಳೆಹಣ್ಣು, ಶೇಂಗಾ ಚಕ್ಕಿಗಳನ್ನು ವಿತರಿಸುತ್ತಿದ್ದು, ಇದನ್ನು ಸೇವಿಸಿ ಸದೃಢ ದೇಹ ಹೊಂದಬೇಕು ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.


ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ಹಾಗೂ ಶೇಂಗಾ ಚಕ್ಕಿ, ಬಾಳೆಹಣ್ಣು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಹೆಚ್ಚಿಸಲು, ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕಿಸುವ ಉದ್ದೇಶದಿಂದ ಸರ್ಕಾರ ಹಲವು ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಕ್ಕಿ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದರು.


ಶಾಲೆಯ ಮುಖ್ಯಶಿಕ್ಷಕ ಗಾಲೀಬ್ ಫೀರಜಾದೆ ಅಧ್ಯಕ್ಷತೆ ವಹಿಸಿದ್ದರು.


ಬಿಇಒ ಎನ್. ಶ್ರೀಧರ್, ಮುಖ್ಯ ಶಿಕ್ಷಕ ಎನ್. ಸುರೇಶಕುಮಾರ್, ಬಿಸಿಯೂಟ ಸಹಾಯಕ ನಿರ್ದೇಶಕ ಕೆ.ಎಚ್. ಮಾರುತೆಪ್ಪ, ಪಪಂ ಸದಸ್ಯ ಸನಾವುಲ್ಲಾ ಮಕಾಂದಾರ, ಉರ್ದು ಸಿಆರ್​ಸಿಯ ಲಿಯಾಖತ್ ಅಲಿ ಹಾಗೂ ಎಸ್​ಡಿಎಂಸಿ ಸದಸ್ಯರು, ಶಾಲೆಯ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net