

ಜಗಳೂರು: ದೇಶ ರಕ್ಷಣೆಗೆ ಯೋಧರು ಎಷ್ಟು ಮುಖ್ಯವೋ, ಆಹಾರ ಭದ್ರತೆಗೆ ರೈತರು ಅಷ್ಟೇ ಮುಖ್ಯ ಎಂದು ಶಾಸಕ ಬಿ. ದೇವೇಂದ್ರಪ್ಪ ಹೇಳಿದರು.
ತಾಲೂಕಿನ ಗುರುಸಿದ್ದಾಪುರ ಗ್ರಾಮದಲ್ಲಿ ಸೋಮವಾರ ಜಿಲ್ಲಾ ಕೃಷಿ ಇಲಾಖೆ ಮತ್ತು ತಾಲೂಕು ಕೃಷಿ ಇಲಾಖೆಯಿಂದ ಮಾಜಿ ಪ್ರಧಾನಿ ಚೌಧರಿ ಚರಣ್‌ಸಿಂಗ್ ಸ್ಮರಣಾರ್ಥ ಹಮ್ಮಿಕೊಂಡ ರೈತ ದಿನಾಚರಣೆಯಲ್ಲಿ ಮಾತನಾಡಿದರು.
ಭೂಮಿ ನಂಬಿದ ರೈತ ಕಷ್ಟಪಟ್ಟು ದುಡಿಯುವಾಗ ಫಲ ಸಿಗುತ್ತದೆ. ಭೂಮಿತಾಯಿ ಮತ್ತು ರೈತ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನೂರಾರು ವರ್ಷಗಳ ಕಾಲ ಬರಗಾಲ ಬೆನ್ನಿಗೆ ಕಟ್ಟಿಕೊಂಡು ಬಂದ ಜಗಳೂರು ತಾಲೂಕಿನಲ್ಲಿ ಬರದ ಛಾಯೆ ದೂರವಾಗಿದೆ. ತರಳಬಾಳು ಶ್ರೀಗಳ ದೂರದೃಷ್ಟಿಯಿಂದ ಈ ವರ್ಷ ಜಲ ಸಮೃದ್ಧವಾಗಿದೆ. ಬರದ ನಾಡನ್ನು ಬಂಗಾರದ ನಾಡನ್ನಾಗಿಸಿದ ಕೀರ್ತಿ ಸಿರಿಗೆರೆ ಶ್ರೀಗಳಿಗೆ ಸಲ್ಲುತ್ತದೆ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತನಾಡಿ, ತಾಲೂಕಿನಲ್ಲಿ ಈ ಬಾರಿ ಹಿಂಗಾರು ರಾಗಿ ಬೆಳೆ ಉತ್ತಮವಾಗಿದೆ. ಕೃಷಿಯಲ್ಲಿ ಯಾಂತ್ರಿಕರಣ ಬಳಕೆ ಮಾಡಿಕೊಳ್ಳಿ. ಗುರುಸಿದ್ದಾಪುರ ಗ್ರಾಮದಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ 55 ಜನರಿಗೆ ಉಚಿತ ಹಸುಗಳನ್ನು ಕೊಡಿಸಲಾಗಿದೆ. ಕೃಷಿಯಲ್ಲಿ ಮೌಲ್ಯವರ್ಧನೆ ಮಾಡಿದರೆ ಮಾತ್ರ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ರೈತರಿಗೆ ಸಲಹೆ ನೀಡಿದರು.
ಪ್ರಗತಿಪರ ಕೃಷಿಕ ರೈತ ರಮೇಶ್ ರೆಡ್ಡಿ, ಜಮ್ಮಾಪುರ ರಂಗನಾಥ್, ರೈತ ಸಂಘದ ಮುಖಂಡ ಭೈರನಾಯಕನಹಳ್ಳಿ ರಾಜು, ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ಸಾದಿಕ್‌ವುಲ್ಲಾ ಮಾತನಾಡಿದರು.
ಗ್ರಾಪಂ ಅಧ್ಯಕ್ಷ ರಮೇಶ, ಗ್ರಾಪಂ ಸದಸ್ಯ ಮಂಜಮ್ಮ, ಹಳ್ಳಿಚೌಡಪ್ಪ, ಸಣ್ಣಸೂರಯ್ಯ, ಮಂಜಣ್ಣ, ಮಹೇಶ್, ಲಿಂಗರಾಜ್, ಪ್ರಭುಶಂಕರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಎಚ್. ಶ್ವೇತಾ, ಎಒ ಜೀವಿತಾ, ಬಿ. ಮಹೇಶ್ವರಪ್ಪ, ಗಿರೀಶ್, ಒಬಳೇಶ್, ರಮೇಶ್, ರೇಣುಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಭು ಶಂಕರ್, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಲಿಂಗರಾಜು, ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಗಿರೀಶ್, ಸತೀಶ್ ಸೇರಿ ಅನೇಕರು ಇದ್ದರು.
ಪ್ರಗತಿಪರ ರೈತರಿಗೆ ಪ್ರಶಸ್ತಿ: ಮುಸ್ಟೂರು ಗ್ರಾಮದ ದಾಕ್ಷಾಯಿಣಿ ಚಂದ್ರಪ್ಪ, ಮೂಡಲಮಾಚಿಕೆರೆ ಗ್ರಾಮದ ಜಿ.ಎನ್. ವೀರೇಶ್, ಹನುಮವ್ವನಾಗತಿಹಳ್ಳಿ ಗ್ರಾಮದ ಶಿವಮ್ಮ, ಜಗಳೂರಿನ ಬಿ.ಕೆ. ರಮೇಶ್, ಕೋಲಮ್ಗಟ್ಟದ ವಿನೋದ್‌ಕುಮಾರ್, ಜಮ್ಮಾಪುರ ಗ್ರಾಮದ ಬಿ.ಆರ್. ರಂಗಪ್ಪ, ಗುರುಸಿದ್ದಾಪುರ ಗ್ರಾಮದ ಎಚ್. ಚಂದ್ರಪ್ಪ, ಚಿಕ್ಕಬನ್ನಿಹಟ್ಟಿ ಗ್ರಾಮದ ಎಂ. ಬಸವರಾಜಪ್ಪ, ದೊಣೆಹಳ್ಳಿ ಗ್ರಾಮದ ಜಿ.ಬಿ. ಮಂಜುನಾಥ್, ಪಲ್ಲಾಗಟ್ಟೆ ಗ್ರಾಮದ ಎಸ್.ಪ್ರದೀಪ್, ಕೆಚ್ಚೇನಹಳ್ಳಿ ಗ್ರಾಮದ ಜಿ.ಎಸ್. ರಶ್ಮೀ, ಚಿಕ್ಕಬಂಟನಹಳ್ಳಿ ಗ್ರಾಮದ ಬಸವರಾಜಪ್ಪ, ಸಾಗಲಗಟ್ಟೆಯ ಎಸ್.ಎಚ್. ಉಜ್ಜಿನಪ್ಪ, ಲಕ್ಕಂಪುರ ಗ್ರಾಮದ ಮಂಜುಳಮ್ಮ ಮತ್ತು 2022-23ನೇ ಸಾಲಿನ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿಯನ್ನು ಚರಗೊಳ್ಳ ಗ್ರಾಮದ ಅರುಣ್ಕುಮಾರ್ ಅವರಿಗೆ ನೀಡಿ ಗೌರವಿಸಲಾಯಿತು.
ಇದೇ ವೇಳೆ ಜಿಲ್ಲಾ ಕೃಷಿ ಇಲಾಖೆ ಮತ್ತು ತಾಲೂಕು ಕೃಷಿ ಇಲಾಖೆಯಿಂದ ನೀಡುವ 2024-25ನೇ ಸಾಲಿನ ಜಿಲ್ಲಾ ಹಾಗೂ ತಾಲೂಕಿನ ಉದಯೋನ್ಮುಖ 17 ಪ್ರಗತಿಪರ ರೈತರನ್ನು ಗುರುತಿಸಿ ಸನ್ಮಾನಿಸಲಾಯಿತು.