ಕೇಂದ್ರದಿಂದಲೇ ದಲಿತರ ಮೀಸಲು ಹಣ ದುರ್ಬಳಕೆ: ಸಚಿವ ಪ್ರಿಯಾಂಕ್​​​ ಖರ್ಗೆ ವಾಗ್ದಾಳಿ

priyanka kharge
Published on

ಬೆಂಗಳೂರು:ಪರಿಶಿಷ್ಟ ಜಾತಿ ಉಪಯೋಜನೆ (ಎಸ್​ಸಿಎಸ್​ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆ (ಟಿಎಸ್​ಪಿ) ಅಡಿ ಮೀಸಲಿಟ್ಟಿದ್ದ ಒಟ್ಟು 1.65 ಲಕ್ಷ ಕೋಟಿ ರೂ.ಅನುದಾನವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ ಎಂದು ಸಚಿವ ಪ್ರಿಯಾಂಕ್​​​ ಖರ್ಗೆ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್​ಸಿಎಸ್​ಪಿ-ಟಿಎಸ್​ಪಿ ಅನುದಾನ ಮೀಸಲಿಟ್ಟದ್ದ ನೂರಾರು ಕೋಟಿ ರೂ. ಅನುದಾನವನ್ನು ಫಸಲ್​ ಭೀಮಾ ಯೋಜನೆ, ಕೃಷಿ ಉನ್ನತಿ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಸಂಶೋಧನಾ, ತಂತ್ರಾನ, ರಸಗೊಬ್ಬರ ಸೇರಿ ಇತರೆ ಕ್ಷೇತ್ರಗಳಿಗೆ ಉಪಯೋಗಿಸಿಕೊಳ್ಳಲಾಗಿದೆ. ಆದಿವಾಸಿ ಕಲ್ಯಾಣದ ಹೆಸರು ಬಳಸಿಕೊಂಡು ಟೆಲಿಕ್ರಾಂ ಕಂಪನಿಗಳಿಗೆ 217 ಕೋಟಿ ಮತ್ತು ಸಮಗ್ರ ಶಿಣ ಅಭಿಯಾನಕ್ಕೆ ಹತ್ತಾರು ಕೋಟಿ ರೂ. ಬಳಸಿಕೊಳ್ಳಲಾಗಿದೆ. ಕೇಂದ್ರ ಸರ್ಕಾರ ನೀಡಿರುವ ದಾಖಲೆಗಳಿಂದಲೇ ಇದು ಗೊತ್ತಾಗಲಿದೆ ಎಂದರು.

ಮೋದಿ ಸರ್ಕಾರ ಬಂದ ಬಳಿಕ ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಹೆಚ್ಚು ಉಪಯೋಗಿಸಲಾಗುತ್ತಿದೆ. ಮಹಾರಾಷ್ಟ್ರ ಸರ್ಕಾರ ಬಜೆಟ್​ನಲ್ಲಿ ಶೇ.5, ಉತ್ತರ ಪ್ರದೇಶದಲ್ಲಿ ಶೇ.4.5 ಮತ್ತು ಗುಜರಾತ್​ನಲ್ಲಿ ಶೇ.9.5 ಮೀಸಲಿಡಲಾಗಿದೆ. ಮಹಾರಾಷ್ಟ್ರದಲ್ಲಿ ಎಸ್ಸಿ ಮತ್ತು ಎಸ್ಟಿಗೆ ಮೀಸಲಿಟ್ಟಿದ್ದ 2 ಸಾವಿರ ಕೋಟಿ ರೂ.ಗಳನ್ನು ರೈತರ ಸಾಲ ಮನ್ನಾ ಮಾಡುವುದಕ್ಕೆ ಬಳಸಿಕೊಂಡಿದ್ದಾರೆ. ಮಧ್ಯಪ್ರದೇಶದಲ್ಲಿ ಗೋರಣೆಗೆ ಅನುದಾನ ಬಳಸಿಕೊಂಡಿದ್ದಾರೆ. ಗುಜರಾತ್​ನಲ್ಲಿ ಪ್ರಧಾನಮಂತ್ರಿ ಅವರ ಜನ್ಮ ಸ್ಥಳದ ಡಾಕ್ಯುಮೆಂಟರಿ ಮಾಡುವುದಕ್ಕೆ 5 ಕೋಟಿ ರೂ.ಅನುದಾನ ಬಳಸಿಕೊಂಡಿದ್ದಾರೆ ಎಂದು ಸಚಿವರು ದಾಖಲೆಗಳ ಸಮೇತ ಎಳೆಎಳೆಯಾಗಿ ಬಿಚ್ಚಿಟ್ಟರು.

ಬಿಜೆಪಿಯಿಂದ ಜನರಿಗೆ ತಪ್ಪು ಮಾಹಿತಿ: ನಮ್ಮ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿದ್ದ ಅನುದಾನವನ್ನು ಬೇರೆ ಉದ್ದೇಶಕ್ಕೆ ಉಪಯೋಗಿಸಿಕೊಂಡಿದ್ದಾರೆ ಎಂದು ಕೆಲ ತಿಂಗಳಿಂದ ಬಿಜೆಪಿಯವರು ಸಾರ್ವಜನಿಕ ವಲಯದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈವರೆಗೆ ಅನುದಾನ ದುರ್ಬಳಕೆಯಲ್ಲಿ ಯಾವ ಕಾನೂನು ಉಲ್ಲಂನೆಯಾಗಿದೆ ಎಂಬುದನ್ನು ಬಿಜೆಪಿಯವರು ಸ್ಪಷ್ಟಪಡಿಸುತ್ತಿಲ್ಲ. ಸಕ್ಷನ್​ 7ಎ, 7ಬಿ ಮತ್ತು 7ಸಿ ಅಡಿ ಅನುದಾನ ನೀಡಲಾಗುತ್ತಿದೆ. ಯಾವ ನಿಯಮದಡಿ ದುರ್ಬಳಕೆ ಬಗ್ಗೆ ಪ್ರತಿಪಕ್ಷ ಹೇಳಬೇಕು. ಬಿಜೆಪಿ ಹಿಂದಿನ ಅಧಿಕಾರದಲ್ಲಿದ್ದಾಗ ಎಷ್ಟು ಅನುದಾನ ಖರ್ಚು ಮಾಡಿರುವ ಬಗ್ಗೆ ಮಾಹಿತಿ ನೀಡಬೇಕು. ಹೀಗಿರುವಾಗ, ಯಾವ ನೈತಿಕತೆ ಇಟ್ಟುಕೊಂಡು ಪ್ರತಿಪಕ್ಷ ಪ್ರತಿಭಟನೆ ಮಾಡಲಿದೆ ಎಂದು ಸಚಿವರು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net