ಮಿಷನ್ ಇಂದ್ರಧನುಷ್ 5.0 ಅಭಿಯಾನ

MI
Published on

ಬೆಂಗಳೂರು: ಲಸಿಕೆಗಳಿಂದ ತಡೆಗಟ್ಟಬಹುದಾದ ಮಾರಕ ರೋಗಗಳ ವಿರುದ್ಧ ಮಕ್ಕಳನ್ನು ರಕ್ಷಿಸಲು ಆರೋಗ್ಯ ಇಲಾಖೆಯು ಅ. 9 ರಿಂದ 14ರವರೆಗೆ ಇಂದ್ರಧನುಷ್ ಅಭಿಯಾನ 5.0 ಮೂರನೇ ಸುತ್ತಿನ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿ ರಾಜ್ಯಾದ್ಯಂತ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿ ಅನುಸಾರ ವಯಸಿಗೆ ಅನುಗುಣವಾಗಿ ಲಸಿಕೆ ಪಡೆಯದ / ಬಿಟ್ಟುಹೋದ / ವಂಚಿತ ಮತ್ತು ಲಸಿಕಾಕರಣಕ್ಕೆ ಬಾಕಿ ಇರುವ ಗರ್ಭಿಣಿಯರು ಹಾಗೂ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಅಭಿಯಾನದಡಿ ಲಸಿಕೆ ನೀಡಲಾಗುವುದು.

ವಿಶೇಷವಾಗಿ ದಢಾರ - ರುಬೆಲ್ಲಾ ರೋಗ ನಿರೋಧಕತೆಯ ಅಂತರವನ್ನು ಕಡಿಮೆ ಮಾಡಲಾಗುವುದು. ದುರ್ಬಲ ಸಮುದಾಯವನ್ನು ತಲುಪುವುದು ಸಮುದಾಯ ಪಾಲ್ಗೊಳ್ಳುವಿಕೆ, ಸಾರ್ವತಿಕ ಲಸಿಕಾ ವೇಳಾಪಟ್ಟಿಗೆ ಇತ್ತೀಚಿಗೆ ಸೇರ್ಪಡೆಗೊಂಡ ಪಿಸಿವಿ ಲಸಿಕೆ ಮತ್ತು 3ನೇ ಡೋಸ್ ಆಗಿ ಸೇರ್ಪಡೆಗೊಳಿಸಿದ ಎ್ಐಪಿವಿ ಲಸಿಕಾಕರಣದ ಪ್ರಗತಿಯನ್ನು ಹಾಗೂ ಡಿಪಿಟಿ ಬೂಸ್ಟರ್ ಅನ್ನು ಓಪಿವಿ ಬೂಸ್ಟರ್ ಲಸಿಕೆಗಳ ಪ್ರಗತಿಯನ್ನು ಹೆಚ್ಚಿಸಲಾಗುವುದು.

ಲಸಿಕೆ ಬಾಕಿ ಇರುವ / ಲಸಿಕೆ ಬಿಟ್ಟು ಹೋಗಿರುವ / ಲಸಿಕೆ ವಂಚಿತರಾಗಿರುವ ಮಕ್ಕಳಿಗೆ ಹಾಗು ಗರ್ಭಿಣಿಯರಿಗೆ ಲಸಿಕೆ ಹಾಕಿಸುವಲ್ಲಿ ಎಲ್ಲರ ಸಹಕಾರ ಮಹತ್ವದಾಗಿರುತ್ತದೆ. ಆದ್ದರಿಂದ ಈ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲಾ ಇಲಾಖೆಗಳು ಸಂವಹನ ತಂತ್ರಜ್ಞಾನ ಅಭಿವೃದ್ಧಿಗೆ ಬೆಂಬಲ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net