ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿದ್ದ ಯುವಕ ನಾಪತ್ತೆ; 3 ದಿನಗಳ ಬಳಿಕ ಗ್ರಾಮದ ನೀರಿನ ಕಟ್ಟೆಯಲ್ಲೇ ಶವ ಪತ್ತೆ!

Missing Youth
Published on

ದೇವನಹಳ್ಳಿ: ಹಬ್ಬದ ದಿನ ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ತೆರಳಿ ನಾಪತ್ತೆ ಆಗಿದ್ದ ಯುವಕನೊಬ್ಬನ ಶವ ಮೂರು ದಿನಗಳ ಬಳಿಕ ಗ್ರಾಮದ ನೀರಿನ ಕಟ್ಟೆಯಲ್ಲೇ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈ ಪ್ರಕರಣ ನಡೆದಿದೆ.

ನಾಪತ್ತೆಯಾಗಿದ್ದ ಯುವಕನ ಶವ ದೊಡ್ಡಬಳ್ಳಾಪುರ ತಾಲೂಕಿನ ಸೂಲುಕುಂಟೆಯಲ್ಲಿನ ನೀರಿನ ಕಟ್ಟೆಯಲ್ಲಿ ಇಂದು ಪತ್ತೆಯಾಗಿದೆ. 23 ವರ್ಷದ ಆನಂದ್ ಎಂಬಾತ ನಾಪತ್ತೆಯಾಗಿ ಮೃತಪಟ್ಟಿರುವ ಯುವಕ. ಸೂಲುಕುಂಟೆ ನಿವಾಸಿಯಾದ ಈತನ ತಾಯಿ ಹಬ್ಬದ ದಿನ ಮಗಳ ಮನೆಗೆ ತೆರಳಿದ್ದರು. ಈತ ಬೆಂಗಳೂರಿನಲ್ಲಿರುವ ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ತೆರಳಿದ್ದ. ಹಬ್ಬ ಮುಗಿಸಿ ಬಂದ ತಾಯಿ, ಮಗ ಎಲ್ಲಿಯೂ ಕಾಣದ್ದರಿಂದ ಹುಡುಕಾಡಿದಾಗ ನೀರಿನ ಕಟ್ಟೆಯಲ್ಲಿ ಆತನ ಶವ ಪತ್ತೆಯಾಗಿದೆ.

ಈತ ಪ್ರೇಮವೈಫಲ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದ್ದರೂ ಇನ್ನೂ ನಿಖರವಾಗಿ ಏನೂ ತಿಳಿದುಬಂದಿಲ್ಲ. ಅಷ್ಟಕ್ಕೂ ಈತ ಬೆಂಗಳೂರಿಗೆ ಹೋಗಿದ್ದನೇ ಅಥವಾ ಅಂದೇ ಊರಲ್ಲೇ ಇದ್ದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದನೇ ಎಂಬಿತ್ಯಾದಿ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ದೊಡ್ಡಬೆಳವಂಗಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net