

ಕಾಸರಗೋಡು: ಕುಂಜತ್ತೂರುಪದವಿನಲ್ಲಿ ವಾಸ್ತವ್ಯ ಹೂಡಿದ್ದ ಉತ್ತರಪ್ರದೇಶ ನಿವಾಸಿ, ಇಲ್ಲಿನ ಫ್ಯಾಕ್ಟರಿ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ರೋಹಿತ್‌ಕುಮಾರ್(26) ನಾಪತ್ತೆಯಾಗಿರುವ ಬಗ್ಗೆ ಮಂಜೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಅಧೀನದಲ್ಲಿರುವ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದ ಇವರು, ಮೂರು ತಿಂಗಳ ಹಿಂದೆಯಷ್ಟೆ ಫ್ಯಾಕ್ಟರಿ ಕೆಲಸಕ್ಕೆ ಆಗಮಿಸಿದ್ದರು. ಶುಕ್ರವಾರ ಬೆಳಗ್ಗೆ 7.30ಕ್ಕೆ ಕೊಠಡಿಯಿಂದ ಹೊರಟಿದ್ದ ಇವರು, 8ರ ವೇಳೆಗೆ ಊರಲ್ಲಿರುವ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದು, ನಂತರ ಸ್ವಿಚ್‌ಆಫ್ ಆಗಿರುವುದಾಗಿ ಫ್ಯಾಕ್ಟರಿ ಮಾಲೀಕ ಅಬ್ದುಲ್ ರಹಮಾನ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ರೋಹಿತ್‌ಕುಮಾರ್ ಆನ್‌ಲೈನ್ ಗೇಮ್‌ನಲ್ಲಿ ಹಣ ತೊಡಗಿಸಿಕೊಂಡಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎನ್ನಲಾಗಿದೆ.